Mankutimmana Kagga by D.V. Gundappa
ಆಗಸದ ಬಾಗು, ಚಂದ್ರಮನ ಗುಂಡಿನ ನುಣ್ಪು । ಸಾಗರದ ತೆರೆವಂಕು, ಗಿಡಬಳ್ಳಿ ಬಳುಕು ॥ ಮೇಘವರ್ಣಚ್ಛಾಯೆ - ಯೀಸೃಷ್ಟಿಯಿಂ ನಮ್ಮೊ । ಳಾಗಿಹುದು ರೂಪರುಚಿ - ಮಂಕುತಿಮ್ಮ ॥ ೨೧೭ ॥
Agasada bAgu, chandramana gunDina nuNpu । sAgarada terevanku, giDa baLLi baLuku ॥ mEghavarNa cChAye - yIsRuShTiyim nammo । LAgihudu rUparuchi - Mankutimma ॥ 217 ॥
ದಿಗಂತದಲ್ಲಿ ಕಾಣುವ ಬಾಗಿದಂತ ಮುಗಿಲು, ನುಣುಪಾಗಿ ಮತ್ತು ಗುಂಡಾಗಿ ಕಾಣುವ ಹುಣ್ಣಿಮೆಯ ಚಂದಿರ, ಅಂಕುಡೊಂಕಾದ ಸಾಗರದ ಅಲೆಗಳು, ಚಿತ್ರ ವಿಚಿತ್ರ ವಿನ್ಯಾಸದ ಗಿಡ ಬಳ್ಳಿಗಳ ಬಳುಕು, ಹಲ ವಿದವಾದ ವರ್ಣಗಳನ್ನು ಧರಿಸುವ ಮೋಡಗಳು, ಆ ಮೋಡಗಳ ವಿನ್ಯಾಸದಿಂದ ಭೂಮಿಯಮೇಲೆ ಬೀಳುವ ನೆರಳಿನಾಕಾರಗಳು, ಹೀಗೆ ಸೃಷ್ಟಿಯ ಹಲವಾರು ವಿಚಿತ್ರಗಳೇ ನಮ್ಮೊಳಗಿನ ರೂಪ ಮತ್ತು ರುಚಿಗಳಿಗೆ ಕಾರಣವಾಗಿವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ
"Let's discuss one of the senses - the sight. The sky that seems to meet the Earth at the horizon, the curve of the Moon, the crookedness of the waves of the sea, the dancing elegance of the plants and creepers, the darkness of the cloud, it's shadow on the ground. By showing us all this, it is nature that taught us to indulge in this sensory pleasure." - Mankutimma
Video Coming Soon
Detailed video explanations by scholars and experts will be available soon.