Mankutimmana Kagga by D.V. Gundappa
ಸಿರಿ ಸೊಬಗುಗಳ ಬೆದಕು, ಕೆಳೆ ಬಲುಮೆಗಳ ಬೆದಕು । ಪರಬೊಮ್ಮ ನಾಟಕದ ವೇಷಚೇಷ್ಟೆ ॥ ಅರಸುತಿಹ ಜೀವ ನಾಯಕನು, ನಾಯಕಿಯವನ । ಕೆರಳಿಸುವ ಮೋಹರುಚಿ - ಮಂಕುತಿಮ್ಮ ॥ ೨೧೬ ॥
siri sobagugaLa bedaku, keLe balumegaLa bedaku । parabomma nATakada vEShachEShTe ॥ arasutiha jIva nAyakanu, nAyakiyavana । keraLisuva mOharuchiye - Mankutimma ॥ 216 ॥
ಮಾನವನಿಗಿರುವ, ಐಶ್ವರ್ಯ ಅಲಂಕಾರಗಳ ಅರಸುವಿಕೆಯ ಆಸೆ, ಸ್ನೇಹ, ಬಂಧನ ಮತ್ತು ಬಲ ಪ್ರದರ್ಶನದಆಸೆ, ಇವೆಲ್ಲವುಗಳನ್ನೂ ಮನುಷ್ಯನ ಮನಗಳಲ್ಲಿ ತುಂಬಿ ಹಲವಾರು ವೇಷಗಳನ್ನು ಹಾಕಲು ಹುರಿದುಂಬಿಸುವುದು ಕೇವಲ ಆ ಪರಮಾತ್ಮನ ಜಗನ್ನಾಟಕದ ಒಂದು ಬಾಗವಷ್ಟೇ . ಪರಮ ಚೇತನದ ಅಂಶವಾದ ಈ ಜೀವನು ಈ ನಾಟಕದ ನಾಯಕನು ಮತ್ತು ಇವನನ್ನು ಈ ನಾಟಕದಲ್ಲಿ ಪಾತ್ರವಹಿಸಲು ಪ್ರೇರೇಪಿಸುವ ನಾಯಕಿಯೇ ಹಲವಾರು ರೀತಿಯ ಆಸೆಗಳು ಮತ್ತು ಜಗತ್ತಿನ ಮೋಹಗಳೆಂದು, ಬಹಳ ಸೂಕ್ಷ್ಮವಾದ ವಿಚಾರವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಉಲ್ಲೇಖಿಸಿದ್ದಾರೆ.
"Life is a struggle; for wealth and pleasures, for position weak or powerful. These are pranks of the characters in the drama directed by the creator. The living being who is going through the struggle is the hero - the protagonist. The feeling that kindles the longing for desires is the heroine." - Mankutimma
Video Coming Soon
Detailed video explanations by scholars and experts will be available soon.