Mankutimmana Kagga by D.V. Gundappa
ಇಹುದಕಿಂತೊಳಿತಿಹುದು; ಒಳಿತ ಗಳಿಸಲ್ಬಹುದು । ಸಹಿಸಿಸುವೆನದಕೆನುವ ಮತಿಯಿನೇ ಪ್ರಗತಿ ॥ ರಹಸಿಯದ ಬುಗ್ಗೆಯದು, ಚಿಮ್ಮುತಿಹುದೆಲ್ಲರೊಳು । ಸಹಜವಾ ಮತಿ ಕೃತಕ - ಮಂಕುತಿಮ್ಮ ॥ ೨೧೫ ॥
ihudakinta oLitihudu; oLita gaLisal bahudu । sahisisuvenu adakenuva matiyinE pragati ॥ rahasiyada buggeyadu, chimmutihudu ellaroLu । sahajavA mati kRutaka - Mankutimma ॥ 215 ॥
ಈಗ ಇರುವ ಸ್ಥಿತಿಗಿಂತ ಇನ್ನೂ ಉತ್ತಮ ಸ್ಥಿತಿ ಇದೆ, ಒಳಿತಾದ ಸ್ಥಿತಿಯನ್ನು ಪಡೆಯಬಹುದು. ಅದಕ್ಕಾಗಿ ನಾನು ಸಾಹಸ ಮಾಡುತ್ತೇನೆ ಎನ್ನುವುದೇ ಮನುಷ್ಯ ಬುದ್ಧಿ. ಆ ರೀತಿ ಹೊಮ್ಮುವ ಬುದ್ಧಿಯ ಬುಗ್ಗೆಗಳೇ ಪ್ರಗತಿಗೆ ಹಾದಿ. ಈ ರೀತಿಯ ಯೋಚನೆಗಳು ಬುಗ್ಗೆ ಬುಗ್ಗೆಯಾಗಿ, ಅಲೆ ಅಲೆಯಾಗಿ ಎಲ್ಲರಲ್ಲೂ ಸಹಜವಾಗೇ ಇರುತ್ತದೆ. ಈ ರೀತಿ ಇರುವ ಸಹಜ ಬುದ್ಧಿಯೂ ಸಹ ಸಹಜದಿಂದ ಉದ್ಭವವಾದ ಕೃತಕತನವೇ ಎಂದು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"There is something better than what we have now. There is a way to get that too. I will have to go though some difficulty to get it. But, I am prepared to do that. The spring of such desires is present in all of us. It is very natural. What this natural longing makes our mind do is artificial." - Mankutimma
Video Coming Soon
Detailed video explanations by scholars and experts will be available soon.