Mankutimmana Kagga by D.V. Gundappa
ಸಹಜ ನಗ್ನತೆ ನಮಗೆ, ಸಹಜ ನಖದಾಡಿಗಳು । ಬಹುಯುಗದ ಸಂಸ್ಕಾರ ವಸ್ತ್ರ ಸಿಂಗಾರ ॥ ಸಹಜತೆ ನಿರಕ್ಷರತೆ, ವಿದ್ಯೆ ತಾಂ ಕೃತಕವಲ । ಸಹಜಿದಿನೆ ಕೃತಕಮುಂ - ಮಂಕುತಿಮ್ಮ ॥ ೨೧೪ ॥
sahaja nagnate namage, sahaja nakha dADigaLu । bahuyugada samskAra vastra singAra ॥ sahajate nirakSharate, vidye tAm kRutakavala । sahajidine kRutakamum - Mankutimma ॥ 214 ॥
ನಗ್ನತೆಯು ಮನುಜನಿಗೆ ಸಹಜ. ಈ ದೇಹದಲ್ಲಿ ಉಗುರುಗಳು ಗಡ್ಡ ಮೀಸೆಗಳು ಸಹಜ. ಆದರೆ ಸಾವಿರಾರು ವರ್ಷಗಳಕಾಲದ ಸಂಸ್ಕಾರದಿಂದ ಮನುಷ್ಯ ಬಟ್ಟೆ ಹಾಕಿಕೊಳ್ಳುವುದನ್ನು, ತನ್ನನ್ನು ತಾನು ಸಿಂಗರಿಸಿಕೊಳ್ಳುವುದನ್ನು ಕಲಿತಿದ್ದಾನೆ. ಹಾಗೆಯೇ ನಿರಕ್ಷರತೆ ಸಹಜ. ಇವನು ಅಕ್ಷರವನ್ನು ಮತ್ತು ವಿದ್ಯೆಯನ್ನು ಕಲಿತ. ಆ ಸಹಜತೆಯಿಂದ ಬಂದ ಕೃತಕತೆಯೇ ಇದು. ಹಾಗಾಗಿ ಹೊರಕಾಣುವ ಕೃತಕತೆಯು ಸಹಜತೆಯಿಂದಲೇ ಬರುತ್ತದೆ ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"It is innate nature to be naked, the nails and the beard. Clothes, fashion and decoration are results of ages of civilizations. To be natural is to be illiterate. To learn is then is to be artificial. The artificial always has its roots in the natural." - Mankutimma
Video Coming Soon
Detailed video explanations by scholars and experts will be available soon.