Back to List

Kagga 213 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಾಜಗುಣವೆಂದುಪೇಕ್ಷಿಪೆಯ ನಿನ್ನವಗುಣವ? । ಸಾಜವನು ಬಿಟ್ಟಲುಗದಿಹುದು ಮೃಗಕೀಟ ॥ ಸಾಜವಂ ಶಿಕ್ಷಿಸುತ ಲೋಕಸಂಸ್ಥಿತಿಗದನು । ಯೋಜಿಪುದೆ ನರಮಹಿಮೆ - ಮಂಕುತಿಮ್ಮ ॥ ೨೧೩ ॥

sAja guNavendu upEkShipeya ninna avaguNava? । sAjavanu biTTu alugadihudu mRugakITa ॥ sAjavam shikShisuta lOka samsthitigadanu । yOjipude naramahime - Mankutimma ॥ 213 ॥

Meaning in Kannada

ತನ್ನ ಅವಗುಣಗಳನ್ನು ತೀರಾ ಸಾಮಾನ್ಯವೆಂದು ಅಥವಾ ಸಹಜವೆಂದು ಅವುಗಳನ್ನು ಉಪೇಕ್ಷಿಸುತ್ತಾನೆ ಮನುಷ್ಯ. ಆದರೆ ಪ್ರಾಣಿ, ಪಕ್ಷಿ, ಕೀಟಗಳು ತಮ್ಮ ಸಹಜ ಗುಣವನ್ನು ಬಿಡುವುದೇ ಇಲ್ಲ. ಹೀಗೆ ಇವನ ದುರ್ಗುಣಗಳನ್ನು ದಂಡಿಸುತ ಅಥವಾ ತಿದ್ದುತ್ತಾ ಈ ಜಗತ್ತಿನಲ್ಲಿ ಮಾನವನ ಬದುಕನ್ನು ಒಂದು ವ್ಯವಸ್ಥಿತವಾದ ರೀತಿಯಲ್ಲಿ ಇಡಬೇಕೆಂದು ಯತ್ನಿಸುವುದೇ ನಿರಂತರವಾಗಿ ನಡೆದಿರುವ ಮನುಷ್ಯ ಪ್ರಯತ್ನವೆಂದು ಒಂದು ಗಹನವಾದ ವಿಚಾರವನ್ನು ಮಂಡಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"Are you turning a blind eye towards your bad habits sighting their innate nature as a reason not to change? Only animals and insects can not get to change their innate behaviours. To curb the innate instincts and to use it for the good of the world order is the greatness of being human." - Mankutimma

Themes

LifeMoralityNatureWar

Video Section

Video Coming Soon

Detailed video explanations by scholars and experts will be available soon.