Back to List

Kagga 205 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಕಲ್ಲಾಗಿ ನಿಲ್ಲುವನು, ಬಳ್ಳಿವೊಲು ಬಳುಕುವನು । ಮುಳ್ಳಾಗಿ ಚುಚ್ಚುವನು, ಫುಲ್ಲಸುಮವಹನು ॥ ಕಲ್ಲೋಲವಾರಿಧಿವೊಲುರವಣಿಸಿ ಮೊರೆಯುವನು । ಕ್ಷುಲ್ಲಮಾನಿಸನಿವನು - ಮಂಕುತಿಮ್ಮ ॥ ೨೦೫ ॥

kallAgi nilluvanu, baLLivolu baLukuvanu । muLLAgi chucchuvanu, phulla sumavu ahanu ॥ kallOla vAridhivolu ravaNisi moreyuvanu । kShulla mAnisanu ivanu - Mankutimma ॥ ೨೦೫ ॥

Meaning in Kannada

ಮನುಷ್ಯನ ಹಲವಾರು ಗುಣಗಳನ್ನು ವರ್ಣಿಸುತ್ತಾ, ಮಾನವನು ಕೆಲಬಾರಿ, ಕಲ್ಲಿನಂತೆ ಗಟ್ಟಿಯಾಗಿಯೂ, ಕೆಲಬಾರಿ ಬಳ್ಳಿಯಂತೆ ವಾಲುತ್ತಾ, ಕೆಲಬಾರಿ ಮುಳ್ಳಿನಂತೆ ಪರರನ್ನು ಚುಚ್ಚುತ್ತಾ, ಕೆಲಬಾರಿ ಅರಳಿದ ಕುಸುಮದಂತೆ ಸುಗಂಧವನ್ನು ಬೀರುತ್ತಾ, ಕೆಲಬಾರಿ ಸಮುದ್ರದ ಅಲೆಯಂತೆ ಮೇಲೆದ್ದು ಮತ್ತೆ ಕೆಳಗೆ ಬೀಳುತ್ತಾ ಸ್ಥಿರ ಮನಸ್ಸಿಲ್ಲದ ಕ್ಷುಲ್ಲಕ ಮನಸ್ಸಿನವನು ಇವನು, ಎಂದು ಪ್ರಸ್ತಾಪ ಮಾಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"What are all the antics a man can do? He can stand still like a stone. He can bend like a creeper. He can hurt like a thorn. He can bring happiness like a fresh flower. He can both enchant and roar like waves at sea. Yet, he is just another being (when compared to the vastness and variety of this universe)." - Mankutimma

Themes

DeathNature

Video Section

Video Coming Soon

Detailed video explanations by scholars and experts will be available soon.