Mankutimmana Kagga by D.V. Gundappa
ಸತ್ತವೆನ್ನಾಶೆಗಳು, ಗೆದ್ದೆನಿಂದ್ರಿಯಗಣವ । ಚಿತ್ತವಿನ್ನಲುಗದೆಂಬಾ ಜಂಬ ಬೇಡ ॥ ಎತ್ತಣಿಂದಲೊ ಗಾಳಿ ಮೋಹಬೀಜವ ತಂದು । ಬಿತ್ತಲಾರದೆ ಮನದಿ - ಮಂಕುತಿಮ್ಮ ॥ ೨೦೬ ॥
sattevu enna AshegaLu, geddenu indriya gaNava । cittavu innu alugadu embA jamba bEDa ॥ ettaNindalo gALi mOha bIjava tandu । bittalArade manadi - Mankutimma ॥ 206 ॥
“ನನಗೆ ಆಸೆಗಳು ಸತ್ತಿವೆ. ನಾನು ಇಂದ್ರಿಯಗಳನ್ನು ಗೆದ್ದಿದ್ದೇನೆ. ನನ್ನ ಮನಸ್ಸು ಇನ್ನು ಚಂಚಲವಾಗದು ” ಎಂಬ ಜಂಬ ಪಡಬೇಡ. ಯಾವುದಾದರೂ ಒಂದು ಕಾರಣದಿಂದ, ನಿನ್ನ ಮನಸ್ಸಿನಲ್ಲಿ ಮತ್ತೆ ಆಸೆಯ ಬೀಜ ಬಂದು ಮೊಳಕೆಯೊಡೆಯಬಹುದಲ್ಲ ಎಂದು ಒಂದು ವಾಸ್ತವಿಕತೆಯನ್ನು ಬಣ್ಣಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Do not be proud like this: 'All my desires are dead. I have conquered all my senses. My mind shall not waver any more.' Wind shall carry a seed of desire (attachment) from somewhere and plant it in your mind. Can't it? " - Mankutimma
Video Coming Soon
Detailed video explanations by scholars and experts will be available soon.