Back to List

Kagga 204 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ದೇವಾಂಶ ಪಶ್ವಂಶಗಳ ಗಂಟು ಮಾನುಷತೆ । ಧೀವಿಮರ್ಶೆಯಿನೊಂದ ಸತ್ಕರಿಸಿ ಬಲಿಸಿ ॥ ಭಾವಪರಿಶೋಧನೆಯಿನಿನ್ನೊಂದ ದಂಡಿಪುದೆ । ಜೀವಪ್ರಕರ್ಷಗತಿ - ಮಂಕುತಿಮ್ಮ ॥ ೨೦೪ ॥

dEva amsha pashu amshagaLa ganTu mAnuShate । dhI vimarsheyina onda satkarisi balisi ॥ bhAva parishOdhaneyina innonda danDipude । jIva prakarShagati - Mankutimma ॥ ೨೦೪ ॥

Meaning in Kannada

ದೇವತೆಗಳಿಗಿರುವ ಗುಣಗಳ ಮತ್ತು ಪಶುಗಳಿಗಿರುವ ಗುಣಗಳ ಮಿಶ್ರಣವೇ ಮನುಷ್ಯಗುಣ. ತನ್ನ ಬುದ್ಧಿಶಕ್ತಿಯನ್ನು ಉಪಯೋಗಿಸಿ ಪಶುಗುಣಗಳನ್ನು ಕರಗಿಸುತ್ತಾ ದೈವೀಗುಣಗಳನ್ನು ಹೆಚ್ಚಿಸಿ ಕೊಳ್ಳುವುದೇ ಪ್ರಕರ್ಷ, ಎಂದರೆ ಪ್ರಗತಿ ಎಂದು ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು ಪ್ರಸ್ತಾಪಿಸುತ್ತಾರೆ.

Meaning & Interpretation

"A human life is a complex mixture of elements of Gods and Demons. One must use his intellect to know and recognise the divine elements and nurture them to be strong. One must also know his inner feelings to recognise the demonic elements and curb them to keep them under check. This is the only way he can make progress in his life." - Mankutimma

Themes

DevotionLifeLove

Video Section

Video Coming Soon

Detailed video explanations by scholars and experts will be available soon.