Mankutimmana Kagga by D.V. Gundappa
ಪರಮೇಷ್ಠಿ ನಿಜಚಾತುರಿಯನಳೆಯ ನಿರವಿಸಿದ । ನೆರಡುಕೈಯಿಂದೆರಡು ಜಂತುಗಳ ಬಳಿಕ ॥ ಇರದೆ ತಾನವನೊಂದುಗೂಡಿಸಲು ಬೆರಗಾಯ್ತು । ನರಿಯು ವಾನರವು ನರ - ಮಂಕುತಿಮ್ಮ ॥ ೧೯೩ ॥
paramEShThi nija chAturiyanaLeya nivarisidanu । eraDu kaiyinda eraDu jantugaLa baLika ॥ irade tAnu avanondugoDisalu beragAytu । nariyu vAnaravu nara - Mankutimma ॥ 193 ॥
ಪರಬ್ರಹ್ಮನು ತನ್ನ ನಿಜವಾದ ಚಾತುರ್ಯವನ್ನು ಪರೀಕ್ಷಿಸಲು ತನ್ನ ಎರಡೂ ಕೈಗಳಿಂದ ಎರಡು ಪ್ರಾಣಿಗಳನ್ನು ಸೃಷ್ಟಿಸಿದನಂತೆ. ಒಂದು ನರಿ, ಇನ್ನೊಂದು ಮಂಗ. ಅವುಗಳನ್ನು ಸೃಷ್ಟಿಸಿದಮೇಲೆ, ಸುಮ್ಮನೆ ಇರದೆ, ಇವೆರಡನ್ನೂ ಒಂದಾಗಿ ಸೇರಿಸಿದನಂತೆ. ಆಶ್ಚರ್ಯವೆಂದರೆ ಅವೆರಡರ ಸಮ್ಮಿಲನದಿಂದ ಉಂಟಾದದ್ದು ನರ( ಮನುಷ್ಯ) ಪ್ರಾಣಿಯಂತೆ, ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಿಸುತ್ತಾರೆ.
"The supreme creator is very smart. With his two hands, he created two animals. And in one move, he merged them into one. They were a fox (ನರಿ) and a monkey(ವಾನರ) and Man(ನರ) was the result - cunning as a fox; fickle as a monkey." - Mankutimma
Video Coming Soon
Detailed video explanations by scholars and experts will be available soon.