Mankutimmana Kagga by D.V. Gundappa
ದೇವದಾನವರ ರಣರಂಗ ಮಾನವಹೃದಯ । ಭಾವ ರಾಗ ಹಠಂಗಳವರ ಸೇನೆಗಳು ॥ ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು । ಜೀವಾಮೃತವನವರು - ಮಂಕುತಿಮ್ಮ ॥ ೧೯೨ ॥
dEva dAnavara ranaranga mAnava hRudaya । bhAva rAga haThangaLu avara sEnegaLu ॥ bhUvi bhava jayagaLa bhrantiyali mereyuvaru । jIvAmRutavanu avaru - Mankutimma ॥ 192 ॥
ಇಂದಿನ ಸಮಾಜದಲ್ಲಿ ಮಾನವರ ನಡವಳಿಕೆಯನ್ನು ವಿಶ್ಲೇಷನೆಮಾಡುತ್ತಾ, ಒಳ್ಳೆಯ ಮತ್ತು ಕೆಟ್ಟ ವಿಚಾರಗಳ ನಡುವಿನ ಯುದ್ಧ ಪ್ರತಿ ಹೃದಯದಲ್ಲೂ ನಡೆದಿದೆ ಮತ್ತು ಜನರೆಲ್ಲಾ, ಭಾವುಕತೆ, ಕೋಪ ಮತ್ತು ಹಠವನ್ನು ಮನಗಳಲ್ಲಿ ತುಂಬಿಕೊಂಡು ಈ ಜಗತ್ತಿನಲ್ಲಿ ವೈಭವದಿಂದ ಜೀವಿಸುತ್ತಿದ್ದೇವೆ ಎನ್ನುವ ಭ್ರಮೆಯಲ್ಲಿ ಜೀವಿಸುತ್ತಾ, ಆತ್ಮದ ವಿಚಾರವನ್ನು ತೊರೆದು, ಅದರಿಂದ ದೊರೆಯುವ ಅಮೃತದ೦ತ ಅನುಭವವನ್ನು ಮರೆತಿದ್ದಾರೆ ಎಂದು ಪ್ರಸ್ತಾಪಮಾಡುತ್ತಾರೆ ಮಾನ್ಯ ಗುಂಡಪ್ಪನವರು.
"Man's heart is a battle ground of the Gods and the Demons (good and the bad). Emaotions, indulgences and adamance are all their armies. In illusions of just being so, winning and losing they exhibit the essence of life." - Mankutimma
Video Coming Soon
Detailed video explanations by scholars and experts will be available soon.