Mankutimmana Kagga by D.V. Gundappa
ಹೃದಯಜೀವನಕಿನಿತು ಬೆಲೆಯಿರದೆ? ಫಲವಿರದೆ? । ಮಧುರಭಾವ ಪ್ರೇಮ ದಯೆಯೆಲ್ಲ ಬರಿದೆ ॥ ವಿಧಿಯಂಗಡಿಯೊಳದನು ಕಸವೆಂದು ತಳ್ಳುವೊಡೆ । ಬದುಕಿನಲಿ ತಿರುಳೇನು? - ಮಂಕುತಿಮ್ಮ ॥ ೧೮೫ ॥
hRudaya jIvanake initu bele irade? phalavirade? । madhura bhAva prEma dayeyella baride ॥ vidhiya angaDiyoLu adanu kasavendu taLLuvoDe । badukinili tiruLEnu? - Mankutimma ॥ 185 ॥
ಹೃದಯವಂತಿಕೆಯಿಂದ ನಡೆಸುವ ಜೀವನಕೆ ಬೆಲೆಯೇ ಇಲ್ಲವೇ? ಅದಕ್ಕೇನೂ ಪ್ರಯೋಜನವಿಲ್ಲವೆ? ಪರಸ್ಪರ ಸವಿಯಾದ ಭಾವನೆಗಳು,ಪ್ರಮಾನುರಾಗಗಳು ದಯೆ ದಾಕ್ಷಿಣ್ಯಗಳು ಕೇವಲ ಪೊಳ್ಳೆ? ವಿಧಿಯ ಆಟದಲ್ಲಿ ಇದನ್ನೆಲ್ಲಾ ಕೆಲಸಕ್ಕೆ ಬಾರದ್ದು ಎಂದು ತಿರಸ್ಕರಿಸುವಹಾಗಿದ್ದರೆ, ಈ ಜೀವನದ ಸ್ವಾರಸ್ಯವೇನು ಎಂದು ಒಂದು ಪ್ರಶ್ನಾ ರೂಪದ ಪ್ರಸ್ತಾಪವನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಮಾಡುತ್ತಾರೆ.
"Is there no consideration to the hearts feelings? To the life? To the lovely feelings, love, compassion? Are all of these feelings just consequences of old deeds that fate throws away as dirt? If that be so, what is the excitement in life?" - Mankutimma
Video Coming Soon
Detailed video explanations by scholars and experts will be available soon.