Mankutimmana Kagga by D.V. Gundappa
ನೋಡುನೋಡುತ ಲೋಕಸಹವಾಸ ಸಾಕಹುದು । ಬಾಡುತಿಹ ಹೂಮಾಲೆ ಗೂಢವಿಹ ಕಜ್ಜಿ ॥ ತೋಡದಿರು ಬಾಳ್ವೆಯಾಳವನು; ಮೇಲ್ಮೇಲೆ ನೀ । ನೋಡಾಡು ಹಗುರದಿಂ - ಮಂಕುತಿಮ್ಮ ॥ ೧೮೪ ॥
nODa nODuta lOka sahavAsa sAkahudu । bADutiha hUmAle gUDhavu iha kajji ॥ tODadiru bALveya ALavanu; mElmEle nI । nODADu haguradim - Mankutimma ॥ 184 ॥
ಈ ಲೋಕದದಲ್ಲಿ ನಮ್ಮ ಬಾಳ್ವೆ ಮೊದಮೊದಲು ಆನಂದವಾಗಿರುತ್ತದೆ . ಎಲ್ಲವೂ ವಿನೂತನವಾಗಿರುತ್ತದೆ, ಎಲ್ಲವೂ ಇಷ್ಟಪಡುವಂತಿರುತ್ತದೆ. ಕಾಲಕ್ರಮೇಣ ಬಾಡುತಿಹ ಹೂ ಮಾಲೆಯಂತೆಯೋ ಅಥವಾ ಬಹಳದಿನದಿಂದ ಬಾಧಿಸುತ್ತಿರುವ ಕಜ್ಜಿಯಂತೆಯೋ, ” ಸಾಕಪ್ಪಾ ಸಾಕು” ಎಂದು ಅನ್ನಿಸತೊಡಗುತ್ತದೆ. ಹಾಗಾಗಿ ಈ ಲೋಕದ ಸಹವಾಸದಲ್ಲಿ ತುಂಬಾ ಆಳವಾಗಿ ಇಳಿಯದೆ, ಮೇಲೆ ಮೇಲೆ ಹಗುರವಾಗಿ ಓಡಾಡಿಕೊಂಡು ನಿನ್ನ ಜೀವನವನ್ನು ಬಾಳು ಎಂದು ಸೂಚನೆಯನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.
"Our interest in this world decreases eventually over time. A garland of flowers will not remain fresh for ever; it wilts. Just like that, a beautiful body may be hiding a itch inside. The world is also like that. It looks beautiful as long as we do not scratch the surface and dig deep. One must learn to enjoy the world by superficially glancing over it." - Mankutimma
Video Coming Soon
Detailed video explanations by scholars and experts will be available soon.