Mankutimmana Kagga by D.V. Gundappa
ಪುಣ್ಯದಿಂ ಬಂದ ಸಿರಿ ಮದಮೋಹಗಳ ಮೂಲ । ಖಿನ್ನನಾಗಿಪ ಪಾಪಫಲವಾತ್ಮಶುದ್ಧಿ ॥ ಅನ್ಯೋನ್ಯಜನಕಗಳು ಪುಣ್ಯಪಾಪಗಳಿಂತು । ಧನ್ಯನುಭಯವ ಮೀರೆ - ಮಂಕುತಿಮ್ಮ ॥ ೧೮೩ ॥
puNyadiM banda siri mada mOhagaLa mUla । khinnanAgipa pApaphalavu Atma shuddhi ॥ anyOnya janakagaLu puNya pApa gaLu intu । dhanyanu ubhayava mIre - Mankutimma ॥ 183 ॥
ಒಬ್ಬ ವ್ಯಕ್ತಿ ಮಾಡಿದ ಪುಣ್ಯಕಾರ್ಯದಿಂದ ಅವನಿಗೆ ಸುಖ ಸಂಪತ್ತುಗಳು ಆನಂದಗಳು ಲಭಿಸುವುವು. ಹಾಗೆಯೆ ಅವನು ಮಾಡಿದ ಪಾಪಕರ್ಮಗಳಿಂದ ನೋವು ದುಃಖ ಕಷ್ಟ ಪಡೆಯುವನು. ಆದರೆ ಈ ಪಾಪ ಪುಣ್ಯಗಳನ್ನೂ ಮೀರಿ ಅವುಗಳ ಪರಿಧಿಯಿಂದ ಮೇಲೇರುವವನೆ ಧನ್ಯ, ಎಂದು ಉಲ್ಲೇಖಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"We get riches due to good deeds done in the past. These riches make us do bad things and hence accumulate bad karma. This bad karma makes us go through a lot of misery. When enduring misery, we do good deeds. Good deeds and Bad deeds thus beget each other and keep the cycle going on for ever. Blessed is the person who can grow beyond both sin and good karma so that he can end the cycle." - Mankutimma
Video Coming Soon
Detailed video explanations by scholars and experts will be available soon.