Mankutimmana Kagga by D.V. Gundappa
ಕರುಮ ಬಂದಿದಿರಹುದು ಮೋಹನದ ರೂಪಿನಲಿ । ಕಿರುನಗುವು ಕುಡಿನೋಟ ಕೊಂಕುನುಡಿಗಳಲಿ ॥ ಕರೆದು ತಳ್ಳುವ, ತಳ್ಕರಿಸುತೊಳಗೆ ಕಿಚ್ಚಿಡುವ । ತರಳತೆಯದೇಂ ತಂತ್ರ? - ಮಂಕುತಿಮ್ಮ ॥ ೧೭೯ ॥
karuma bandu idirabahudu mOhanada rUpinali । kirunaguvu kuDinOTa konku nuDigaLali ॥ karedu taLLuva, talkarisuta oLage kicchiDuva । taraLareyadEm tantra? - Mankutimma ॥ 179 ॥
ನಮ್ಮ ಕರ್ಮವು ನಮ್ಮನ್ನು ಈ ಜಗತ್ತನ್ನು ಪ್ರೀತಿಸುವಂತೆ ಮಾಡುತ್ತದೆ. ನಮ್ಮನ್ನು ಆಕರ್ಷಿಸುತ್ತದೆ. ಆ ಆಕರ್ಷಣೆಯಲ್ಲಿ ಸಿಕ್ಕು ನಾವು ಜಗದ ಜನರ ಕುಹಕದ ಕಿರುನಗೆ, ತಿರಸ್ಕಾರದ ಕುಡಿನೋಟ ಮತ್ತು ಕೊಂಕುನುಡಿಗಳಿಗೆ ಬಲಿಯಾಗುತ್ತೇವೆ. ನಮ್ಮನ್ನು ಕರೆದಂತೆ ಮಾಡಿ ತಬ್ಬಿಕೊಂಡಂತೆ ಮಾಡಿ ಪುನಃ ತಳ್ಳಿಬಿಡುವ ಈ ಚಪಲತೆಯ ಉಪಾಯ ಅಥವಾ ಉದ್ದೇಶ್ಯ ಏನು ಎಂದು ತಿಳಿಯದಾಗಿದೆ ಎಂದು ಪ್ರಸ್ತಾಪಮಾಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Our previous actions may come back to us as fate in many ways; as love, as a delighting smile, as naughty glances from the corner of the eye, as harsh insulting words. It has the habit of drawing you close and then throwing you out. It can hug you tight and burn you from inside. Who know what plan is it hatching to get you?" - Mankutimma
Video Coming Soon
Detailed video explanations by scholars and experts will be available soon.