Back to List

Kagga 180 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮೃತ್ಯು ತಾಂ ಬಂದು ಮೋಹಿನಿಯರೂಪದಿ ನಿನ್ನ । ಚಿತ್ತವನು ಸೆರೆವಿಡಿದು ನೆತ್ತರನು ಬಸಿದು ॥ ನಿತ್ಯ ನಿನ್ನಸುವ ಲವ ಲವ ಪೀರುತಲಿ ದೀರ್ಘ । ಹತ್ಯೆಯಲಿ ಹರುಷಿಪಳೊ - ಮಂಕುತಿಮ್ಮ ॥ ೧೮೦ ॥

mRutyu tAm bandu mOhiniya rUpadi ninna । chittavanu sereviDidu nettaranu basidu ॥ nitya ninna asuva lava lava pIrutali dIrgha । hatyeyali haruShipaLo - Mankutimma ॥ 180 ॥

Meaning in Kannada

ಪಿಶಾಚಿಗಳಲ್ಲಿ ಮೋಹಿನಿ ಎಂಬುದು ಒಂದು ಹೆಣ್ಣು ರೂಪಿನ ಪಿಶಾಚಿ. ಅದು ಅತೀ ಸುಂದರವಾಗಿ ತನ್ನ ಪಾಶಕ್ಕೆ ಸಿಕ್ಕವನ ರಕ್ತವೀರ್ಯಗಳನ್ನೆಲ್ಲ ಕೊಂಚ ಕೊಂಚವಾಗಿ ಹೀರಿ ಶಕ್ತಿಹೀನನನ್ನಾಗಿಸಿ ದೀರ್ಘಕಾಲ ನರಳುವಂತೆ ಮಾಡಿ, ಕಡೆಗೆ ಸಾವಿನ ತೆಕ್ಕೆಗೆ ನಮ್ಮನ್ನು ನೂಕುತ್ತಾಳೆ. ಇದು ಈ ಕಗ್ಗದ ಹೂರಣ. ನಾವೆಲ್ಲಾ ಹೇಗೆ ಈ ಜೀವನದ ” ಮೋಹಿನೀ ಬಲೆಯಲ್ಲಿ” ಸಿಕ್ಕು ನಮ್ಮ ಬಾಳನ್ನು ಅಳಿವಿನೆಡೆಗೆ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಸ್ಪಷ್ಟವಾಗಿ ಬರೆದಿದ್ದಾರೆ ಮಾನ್ಯ ಗುಂಡಪ್ಪನವರು.

Meaning & Interpretation

"Death works in mysterious ways. She comes to you as enchanting damsel. She steals your mind. She sucks the life blood out of you. It kills you by taking life away from you little by little. She takes pleasure in doing so." - Mankutimma

Themes

LifeDeathWarDuty

Video Section

Video Coming Soon

Detailed video explanations by scholars and experts will be available soon.