Mankutimmana Kagga by D.V. Gundappa
ದ್ವೇಷ ರೋಷಗಳವೊಲೆ ನೇಹಮುಂ ಮೋಹಮುಂ । ಪಾಶವಾಗಲ್ಬಹುದು ನಿನಗೆ ಮೈಮರಸಿ ॥ ವಾಸನೆಗಳುರುಬಿ ಚಿತ್ತಜ್ವರಂಗಳ ಬಿತ್ತಿ । ಮೋಸದಲಿ ಕೊಲ್ಲುವುವೊ - ಮಂಕುತಿಮ್ಮ ॥ ೧೭೮ ॥
dvESha rOShagaLavole nEhamum mOhamum । pAshavAgal bahudu ninage maimarasi ॥ vAsanegaLurubi chitta jvarangaLa bitti । mOsadali kolluvuvo - Mankutimma ॥ 178 ॥
ಈ ಜಗತ್ತಿನಲ್ಲಿ ಪರಸ್ಪರ ಸಂಬಂಧಗಳು ದ್ವೇಷ, ರೋಷ, ಪ್ರೀತಿ, ಪ್ರೇಮ ಅನುರಾಗ, ಮೋಹಗಳಿಂದ ಕೂಡಿದ್ದು ಅವುಗಳು, ನಿನಗೆ ಅರಿವಾಗದಂತೆ ನಿನ್ನ ಕುತ್ತಿಗೆಗೆ ಉರುಳಾಗವುದು. ಈ ಎಲ್ಲ ಸಂಬಂಧಗಳು ನಿನ್ನ ಮನಸ್ಸಿನಲ್ಲಿ ತಾಪವನ್ನು ಉಂಟುಮಾಡಿ ನಿನಗರಿವಿಲ್ಲದಂತೆಯೇ ನಿನ್ನನ್ನು ಕೊಲ್ಲುತ್ತದೆಯೋ ಎಂದು ಒಂದು ವಾಸ್ತವಿಕ ಸತ್ಯವನ್ನು ಸೂಚ್ಯವಾಗಿ ನಮಗೆ ಅರುಹುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Just like hatred and rage can hurt you; so can friendship and attachment (excessive love). They can make you forget yourself and become a noose around your neck. It will make you get into bad habits, gives you mental agony and kills you by deceit." - Mankutimma
Video Coming Soon
Detailed video explanations by scholars and experts will be available soon.