Mankutimmana Kagga by D.V. Gundappa
ಬಂಧುವುಂ ಮಿತ್ರನುಂ ಭೃತ್ಯನುಂ ಶತ್ರುವೊಲೆ । ದಂಡಧರನೋಲಗಕೆ ನಿನ್ನನೆಳೆವವರೋ ॥ ಅಂದದೊಡವೆಯ ಮೊನೆಗಳಿಂದೆದೆಯನೊತ್ತುವಾ । ಮಂದಹಸಿತದ ಕೊಲೆಯೊ - ಮಂಕುತಿಮ್ಮ ॥ ೧೭೭ ॥
bandhuvum mitranum bhRutyanum shatruvole । danDadharana Olagake ninnanu eLevavarO ॥ andada oDaveya monegaLinda edeyanu ottuva । mandahasitada koleyo - Mankutimma ॥ 177 ॥
ಸ್ವಾರ್ಥವಿಲ್ಲದೆ ನಮಗೆ ಸಹಾಯ ಮಾಡುವವರು ಇಡೀ ಜಗತ್ತಿನಲ್ಲೇ ಕಾಣಸಿಗುವುದು ದುರ್ಲಭ. ನಮಗೆ ಸಹಾಯ ಮಾಡುವವರೆಲ್ಲ, ತಮ್ಮದೇ ಆದ ಕಾರಣಗಳಿಗಾಗಿ ನಮಗೆ ಒದಗುತ್ತಿರುತ್ತಾರೆ. ಆದರೆ ಅವರು ಮಾಡುವ ಸಹಾಯ ಅವರಿಗೇ ಹೆಚ್ಚು ಉಪಕಾರಿಯಾಗಿ ನಮಗೆ ಕಷ್ಟಗಳ ಫಲ ಮಾತ್ರ ಸಿಗುತ್ತವೆ. ಅವರೆಲ್ಲ ನಮಗೆ ಮಿತ್ರರಂತೆ ಕಂಡರೂ ವಾಸ್ತವದಲ್ಲಿ ಅವರು ನಮಗೆ ಶತ್ರುಗಳಂತಾಗಿ, ನಮಗೆ ಯಮಲೋಕದ ಧರ್ಶನ ಮಾಡಿಸುವವರಂತೆ ಎಂದು ಒಂದು ಕಟುಸತ್ಯವನ್ನು ಅರುಹುತ್ತಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ.
"The relatives, the friends and the servants are all your enemies. They are only leading you to the court of death with lot of baggage. They seem to be smiling when they kill you, just like a sharp end of an ornament pressing against your chest." - Mankutimma
Video Coming Soon
Detailed video explanations by scholars and experts will be available soon.