Back to List

Kagga 176 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂಗಿತಜ್ಞಾನವಿಲ್ಲದ ಬಂಧುಪರಿವಾರ । ಹಂಗಿಸುವ ಛಲವುಳ್ಳ ಸತಿಪುತ್ರಸಖರು ॥ ಬಂಗಾರದಸಿ ಚುಚ್ಚೆ ಸಿಂಗರದ ಬೊಟ್ಟೆನುವ । ಮಂಗಬುದ್ಧಿಯ ಜನರು - ಮಂಕುತಿಮ್ಮ ॥ ೧೭೬ ॥

ingita jnAnavillada bandhu parivAra । hangisuva ChalavuLLa sati putra sakharu ॥ bangArada asi chucche singarada boTTenuva । manga buddhiya janaru - Mankutimma ॥ 176 ॥

Meaning in Kannada

ಪರರ ಮನಸ್ಸಿನಲ್ಲಿ ಏನಿದೆ ಎಂದು ಅರಿಯದೆ ನಮಗೆ ಕೆಲಸಕ್ಕೆಬಾರದ ಬುದ್ಧಿವಾದವನ್ನು ಹೇಳುವ ಬಂಧುಗಳು ಮತ್ತು ಪರಿವಾರದವರು, ನಮ್ಮನ್ನು ಹಂಗಿಸುವ ಹಠ ಮತ್ತು ಧೈರ್ಯಮಾಡುವ ನಮ್ಮದೇ ಪತ್ನಿ, ಪುತ್ರ ಮತ್ತು ಸ್ನೇಹಿತರುಮತ್ತು ಅವರು ಮಾಡುವ ಸಲಹೆ ಸೂಚನೆಗೆ ಸರಿ ಎಂದು ನಮಗೆ ಬಲವಂತ ಹೇಗಿದೆಯೆಂದರೆ, ಚಿನ್ನದ ಕತ್ತಿಯಲ್ಲಿ ನಮ್ಮ ಹೇಗೆ ಚುಚ್ಚಿ ಅದು ಅಲಂಕಾರದ ತಿಲಕ ಎಂದು ಹೇಳುವ ಮಂಗ ಬುದ್ಧಿಯ ಜನರು ಎಂದು ಮಾನ್ಯ ಗುಂಡಪ್ಪನವರು ಟೀಕಾರೂಪದಲ್ಲಿ ಈ ಕಗ್ಗದಲ್ಲಿ ಉಲ್ಲೇಖ ಮಾಡಿದ್ದಾರೆ.

Meaning & Interpretation

"People may never understand what gives meaning to your life. Your wife, children and relatives are determined to taunt you for your ways. They are so monkey minded that if you are pricked (on the forehead) by a golden knife, instead of grieving, they applaude it as a good decoration." - Mankutimma

Themes

WisdomLifeMoralitySociety

Video Section

Video Coming Soon

Detailed video explanations by scholars and experts will be available soon.