Mankutimmana Kagga by D.V. Gundappa
ಕಾಂಕ್ಷೆಗಳ ಬೋಧಿಸುವ ಬಂಧುಸಖರುಪಕಾರ । ಯಕ್ಷಿಯರು ಮ್ಯಾಕ್ ಬೆತನಿಗೆಸಗಿದುಪದೇಶ ॥ ಉತ್ಸಾಹವಿದ್ದೇನು? ವಾತ್ಸಲ್ಯವಿದ್ದೇನು? । ಅಕ್ಷಿ ನಿರ್ಮಲವೇನೊ? - ಮಂಕುತಿಮ್ಮ ॥ ೧೭೫ ॥
kAnkShegaLa bOdhisuva bandhusakhara upakAra । yakShiyaru mAcbethanige esagida upadEsha ॥ utsAhaviddEnu? vAtsalyaviddEnu? । akShi nirmalavEno? - Mankutimma ॥ 175 ॥
ನಮ್ಮಲ್ಲಿ ಆಸೆಗಳನ್ನು ಹುಟ್ಟಿಸುವ ಮತ್ತು ವಸ್ತು ವಿಷಯವಾಗಿ ನಮಗೆ ಭೋಧನೆಮಾಡುವ ನಮ್ಮ ಬಂಧುಗಳು, ಸ್ನೇಹಿತರು , ಕೇವಲ ಯಕ್ಷಿಣಿಯರು ಮ್ಯಾಕ್ ಬೆತ್ ನಿಗೆ ಮಾಡಿದ ಉಪದೇಶದಂತೆ ಇದೆ. ನಮ್ಮನ್ನು ಕುರಿತು ಅವರಲ್ಲಿ ವಿಶ್ವಾಸವಿದ್ದರೇನು ಅಥವಾ ಪ್ರೀತಿ ಅನುರಾಗವಿದ್ದರೇನು , ಅವರ ಉದ್ಧೇಶಗಳು ಕಲುಷಿತವಾಗಿದೆಯೇನೋ ನೋಡಿಕೋ ಎಂದು ಒಂದು ಸೂಚನೆಯನ್ನು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ನೀಡುತ್ತಾರೆ.
"We think friends and relatives help us out by guiding us and showing us aspirations. But they are nothing different than the fairies who whispered in Mac Beth's ears. What is the use of all enthusiasm and love? One must see if their vision is clear (and not blinded by their prejudices)." - Mankutimma
Video Coming Soon
Detailed video explanations by scholars and experts will be available soon.