Back to List

Kagga 171 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಇಂದು ಮದುವೆಯ ಹಬ್ಬ; ನಾಳೆ ವೈಕುಂಠ ತಿಥಿ । ಇಂದು ಮೃಷ್ಟಾನ್ನಸುಖ, ನಾಳೆ ಭಿಕ್ಷಾನ್ನ ॥ ಇಂದು ಬರಿಯುಪವಾಸ, ನಾಳೆ ಪಾರಣೆ - ಯಿಂತು । ಸಂದಿರುವುದನ್ನ ಋಣ - ಮಂಕುತಿಮ್ಮ ॥ ೧೭೧ ॥

indu maduveya habba; nALe vaikunTha tithi । indu mRuShTAnna sukha, nALe bhikShAnna ॥ indu bariya upavAsa, nALe pAraNe - yintu । sandiruvudu anna RuNa - Mankutimma ॥ 171 ॥

Meaning in Kannada

ನಮ್ಮಗೆ ದಕ್ಕುವ ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿಯಲ್ಲಿ ಇರುತ್ತೆ ಎಂದು ಸ್ಪಷ್ಟವಾಗಿ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಸುಲಲಿತವಾಗಿ ಬರೆದಿದ್ದಾರೆ. ನಮ್ಮ ಜೀವನದಲ್ಲಿ ಇಂತಹದನ್ನು ನಾವು ಬಹಳ ನೋಡುತ್ತೇವೆ. ಇಂದು ಹಬ್ಬದ ವಾತಾವರಣ ನಾಳೆ ಸೂತಕದ ಭಾವ. ಇಂದು ಪುಷ್ಕಳ ಭೋಜನ ನಾಳೆ ಉಪವಾಸ. ಇಂದು ನಮ್ಮ ಮನೆಯಲ್ಲೇ ಊಟ. ನಾಳೆ ಇನ್ನೆಲ್ಲೋ ಇನ್ಯಾರಮನೆಯಲ್ಲೋ. ಅನ್ನದ ಋಣ ಒಂದೊಂದು ದಿನ ಒಂದೊಂದು ರೀತಿ. ಈ ಜಗತ್ತಿನ ಪರಿಯೇ ಈ ರೀತಿ.

Meaning & Interpretation

"Today we rejoice since it is a wedding day. Tomorrow, it could be a funeral. Today we get a full course special meal. Tomorrow we may have to ask for alms. Today we have to fast. Tomorrow we may get special food. We will settle the debt of food by all these means." - Mankutimma

Themes

Morality

Video Section

Video Coming Soon

Detailed video explanations by scholars and experts will be available soon.