Back to List

Kagga 170 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಉಣುವುದುಡುವುದು ಪಡುವುದಾಡುವುದು ಮಾಡುವುದು । ಋಣಗಳೆಲ್ಲವು ಪೂರ್ವಸಂಚಿತಾಂಶಗಳು ॥ ಹಣೆಯೊಳದು ಲಿಖಿತಮಿರೆಯುಂ ವಾಚಿಸುವನಿಲ್ಲ । ಗೊಣಗಾಟವಳಿಸುವುದೆ? - ಮಂಕುತಿಮ್ಮ ॥ ೧೭೦ ॥

uNuvudu uDuvudu paDuvudu ADuvudu mADuvudu । RuNagaLellavu pUrvasanchita amshagaLu ॥ haNeyoLadu likhitam ireyum vAchisuvanu illa । goNagATavu aLisuvude? - Mankutimma ॥ 170 ॥

Meaning in Kannada

ನಾವು ಉಣುವುದು, ಉಡುವುದು, ಆಡುವುದು, ಪಡುವುದು, ಪಾಡುವುದು, ಪರದಾಡುವುದು ಮತ್ತು ಇವುಗಳಿಗೆ ಸಂಬಂಧಪಟ್ಟ ವ್ಯಕ್ತಿಗಳಲ್ಲೆರ ಸಂಬಂಧಗಳೂ ಕೇವಲ ಋಣ ರೂಪದಲ್ಲೇ ನಮಗೆ ಸಂಧಿವೆ.ನಮ್ಮ ಹಣೆಬರಹವೇ ಈ ರೀತಿ ಇರುವಾಗ, ಅದನ್ನು ಓದಲು ಯಾರಿಗೂ ಆಗುವುದಿಲ್ಲ . ಓದಲಾಗದಿದ್ದರೂ ಅದನ್ನು ಕುರಿತು ಗೊಣಗಾಡಿದರೆ, ಬರೆದ ಬರಹ ಅಳಿಸಲಾಗುವುದೇ, ಎಂದು ಪ್ರಾರಬ್ಧ ಕರ್ಮದ ಒಂದು ವಿಷಯವನ್ನು ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"What ever we eat, dress, endure, play, create are all consequences (or unsettled loans) of our previous actions. Everything is written clearly on the forehead. But there is no one who can read it. Will any amount of lamenting erase it?" - Mankutimma

Themes

Death

Video Section

Video Coming Soon

Detailed video explanations by scholars and experts will be available soon.