Mankutimmana Kagga by D.V. Gundappa
ಋಣದ ಮೂಟೆಯ ಹೊರಿಸಿ, ಪೂರ್ವಾರ್ಜಿತದ ಹುರಿಯ । ಕುಣಿಕೆಯಲಿ ನಿನ್ನ ಕೊರಳನು ಬಿಗಿದು ವಿಧಿಯು ॥ ತೃಣದ ಕಡ್ಡಿಯ ಮುಂದೆ ಹಿಡಿದಾಶೆ ತೋರುತಿರೆ । ಕುಣಿವ ಗರ್ದಭ ನೀನು - ಮಂಕುತಿಮ್ಮ ॥ ೧೬೯ ॥
RuNada mUTeya horisi, pUrvAjitada huriya । kuNikeyali ninna koraLanu bigidu vidhiyu ॥ tRuNada kaDDiya munde hiDidAshe tOrutire । kuNiva gardabha nInu - Mankutimma ॥ 169 ॥
ಋಣದ ಮೂಟೆಯನ್ನು ನಮ್ಮ ಮೇಲೆ ಹೊರಿಸಿ, ಅದನ್ನೂ ಸೇರಿಸಿ, ಪೂರ್ವಾರ್ಜಿತವೆಂಬ ಹುರಿಯಿಂದ ಕುಣಿಕೆ ಮಾಡಿ ನಮ್ಮ ಕೊರಳಿಗೆ, ಬಿಗಿದಿದ್ದಾನೆ ಆ ವಿಧಿ . ನಮ್ಮ ಮುಂದೆ ಒಂದು ಸಣ್ಣ ಹುಲ್ಲುಕಡ್ಡಿಯಂತ ಆಸೆಯನ್ನು ತೋರಿಸುತ್ತಾ, ನಮ್ಮ ಬಾಳನ್ನು ಎಳೆದುಕೊಂಡು ಹೋಗುತ್ತಿದ್ದಾನೆ. ಅವನ ತಾಳಕ್ಕೆ ಕುಣಿಯುವ ಕತ್ತೆ “ನೀನು” ಎಂದು ತಮಗೆ ತಾವು ಹೇಳಿಕೊಳ್ಳುತ್ತಾ ಇಡೀ ಮನುಕುಲದ ಸ್ಥಿತಿಯನ್ನು ವಿಡಂಬನಾತ್ಮಕವಾಗಿ ವರ್ಣಿಸಿದ್ದಾರೆ, ಮಾನ್ಯ ಗುಂಡಪ್ಪನವರು.
"You are the donkey that providence controls. It puts the weight of consequences of previous actions on you. It makes a noose made out of rope made of old actions. It puts the noose around your neck and tightens it. It dangles a handful of grass in front of you to keep you interested and dance to its tunes." - Mankutimma
Video Coming Soon
Detailed video explanations by scholars and experts will be available soon.