Mankutimmana Kagga by D.V. Gundappa
ಕ್ಷಿತಿಚಕ್ರ ರವಿಚಕ್ರ ಋತುಚಕ್ರಗಳಿಗಿಹುದು । ಮಿತವೃತ್ತಿ; ನರನಿಗಂತೆಯೆ ಕರ್ಮನಿಯತಿ ॥ ಕ್ಷಿತಿಕಂಪ ರಾಹುಕೇತುಭ್ರಮೆ ನರಪ್ರಗತಿ । ಅತಿಚರಿತೆ ಪ್ರಕೃತಿಯಲಿ - ಮಂಕುತಿಮ್ಮ ॥ ೧೬೭ ॥
kShiti chakra ravi chakra Rutu chakragaLige ihudu । mita vRutti; naranige anteye karma niyati ॥ kShiti kaMpa rAhu kEtu bhrame nara pragati । ati charite pragatiyali - Mankutimma ॥ 167 ॥
ಭೂಮಿಗೆ ಎರಡು ರೀತಿಯ ಚಲನೆಗಳಿವೆ. ಒಂದು ಅದು ತನ್ನ ಅಕ್ಷೆಯ ಮೇಲೆ ಸುತ್ತುತ್ತಿರುತ್ತದೆ. ಹಾಗೆ ಸುತ್ತಿಕೊಂಡೇ ಸೂರ್ಯನ ಪರಿಭ್ರಮಣೆ ಮಾಡುತ್ತದೆ. ಈ ಎರಡೂ ಸುತ್ತುವಿಕೆಯಿಂದ ಋತು ಬದಲಾವಣೆಗಳಾಗುತ್ತವೆ. ನಮ್ಮ ಎಲ್ಲ ಕಾಲಗಣನೆ, ದಿನ, ವಾರ, ತಿಂಗಳುಗಳ ಲೆಕ್ಕಕ್ಕೆ ಈ ಸುತ್ತುವಿಕೆಯೇ ಆಧಾರ. ಆದರೆ ಅವುಗಳಿಗೆ ಅಷ್ಟುಬಿಟ್ಟರೆ ಬೇರೆ ಕೆಲಸವಿಲ್ಲ. ಅಂದರೆ ಅವುಗಳ ಪ್ರವೃತ್ತಿಗೆ ಒಂದು ಮಿತಿ ಇದೆ. ಅವು ಎಂದಿಗೂ ತಮ್ಮ ಮಿತಿಗಳನ್ನು ಮೀರಿ ಕೆಲಸ ಮಾಡಲಾರವು
"The movement of earth and the Sun along its orbit, the cycle of seasons are all well defined and bound by the rules. Just like that, man's fate is decided by the actions he takes. (Typically, we believe good returns follow good deeds). However, there are also some incidents in nature that are outside of the system that can not be predicted - like earth quakes and comets. So is man's progress - unpredicatable." - Mankutimma
Video Coming Soon
Detailed video explanations by scholars and experts will be available soon.