Mankutimmana Kagga by D.V. Gundappa
ಹುಳು ಹುಟ್ಟಿ ಸಾಯುತಿರೆ, ನೆಲ ಸವೆದು ಕರಗುತಿರೆ । ಕಡಲೊಳೆತ್ತಲೊ ಹೊಸದ್ವೀಪವೇಳುವುದು ॥ ಕಳೆಯುತೊಂದಿರಲಿಲ್ಲಿ, ಬೆಳೆವುದಿನ್ನೊಂದೆಲ್ಲೊ । ಅಳಿವಿಲ್ಲ ವಿಶ್ವಕ್ಕೆ - ಮಂಕುತಿಮ್ಮ ॥ ೧೬೬ ॥
huLu huTTi sAyutire, nela savedu karagutire । kaDaloLu ellalo hosa dvIpavu ELuvudu ॥ kaLeyuta ondiralu illi, beLevudu innondu ello । aLivilla vishvakke - Mankutimma ॥ 166 ॥
ಈ ಜಗತ್ತಿನಲ್ಲಿ ಒಂದು ಹುಳ ಸತ್ತರೆ ಹತ್ತು ಹುಟ್ಟುತ್ತವೆ. ನಾವು ಒಂದು ಸೊಳ್ಳೆಯನ್ನು ಹೊಸಕಿ ಹಾಕಿದರೆ, ಬೇರೆಲ್ಲೋ ಸಾವಿರ ಹುಟ್ಟಿರುತ್ತದೆ. ಒಂದು ಸಸಿ ನಾಶವಾದರೆ ಬದಲಾಗಿ ಸಾವಿರಾರು ಹುಟ್ಟುತ್ತವೆ. ಭೂಮಿಯ ಮೇಲ್ಮೈಯೂ ಬದಲಾಗುತ್ತಿರುತ್ತದೆ. ಎಲ್ಲೋ ಸಾಗರ ವಿಸ್ತಾರಗೊಂಡು ಕೆಲ ನೆಲಬಾಗ ಕೊಚ್ಚಿ, ಮುಚ್ಚಿಕೊಂಡು ಹೋದರೆ, ಮತ್ತೆಲ್ಲೋ ಹಲ ದ್ವೀಪಗಳು ತಲೆಯೆತ್ತುತ್ತವೆ. ಒಂದು ಎಲ್ಲೋ ಕಳೆದು ಹೋಯಿತು ಎಂದರೆ ಮತ್ತೆಲ್ಲೋ ಇನ್ನೊಂದು ಬೆಳೆದು ನಿ೦ತಿರುತ್ತದೆ. ಹೀಗೆ ಅಳಿವು, ಸುಳಿವು, ಉಳಿವುಗಳ ಪ್ರಕ್ರಿಯೆ ನಿರಂತರವಾಗಿ ಮತ್ತು ನಿರಾತಂಕವಾಗಿ ಈ ಜಗತ್ತಿನಲ್ಲಿ ನಡೆಯುತ್ತಿರುತ್ತದೆ . ಹಾಗಾಗಿ ಈ ಜಗತ್ತಿಗೆ ಅಳಿವಿಲ್ಲ ಎನ್ನುವುದೇ ಗುಂಡಪ್ಪನವರ ಈ ಕಗ್ಗದ ಹೂರಣ.
"As insects and worms are being born and dying every day, as earth gets eroded and reduced everyday - some where in the ocean a new island is getting formed. As one diminishes, something else increases. There is no end to this process or to this world." - Mankutimma
Video Coming Soon
Detailed video explanations by scholars and experts will be available soon.