Mankutimmana Kagga by D.V. Gundappa
ಹಳಯ ಮಲೆ ಹಳೆಯ ನೆಲವಾದೊಡೆಯುಮೊರತೆ ಮಳೆ । ಹೊಳೆನೀರನಾವಗಂ ಪೊಸದಾಗಿಸುವವೊಲ್ ॥ ಹಳೆಯ ಕರ್ಮವ ಹೊಸದು ಕೊಚ್ಚಿ ಪೌರುಷನದಿಯ । ಬೆಳೆಯಿಪುದು ನವತೆಯಲಿ - ಮಂಕುತಿಮ್ಮ ॥ ೧೬೪ ॥
haLeya male haLeya nelavAdoDeyum orate maLe । hoLe nIranAvagam posadagisuvavol ॥ haLeya karmava hosadu kocchi pauruSha nadiya । beLeyipudu navateyali - Mankutimma ॥ 164 ॥
ಹಳೆಯ ಭೂಮಿ ಮತ್ತು ಹಳೆಯ ಬೆಟ್ಟವಾದರೂ ಹೊಸದಾಗಿ ಸುರಿಯುವ ಮಳೆಯು ನದೀ ನೀರನ್ನು ಹೊಸದಾಗಿಸುವಂತೆ, ಹೊಸ ಕರ್ಮಗಳು ಹಳೆಯ ಕರ್ಮಗಳನ್ನು ಕೊಚ್ಚಿಕೊಂಡು ಹೋಗಿ, ಮತ್ತೆ ಹೊಸ ಹೊಸ ಕರ್ಮಗಳ ಸಾಂಗತ್ಯವನ್ನು ನಮಗೆ ನೀಡುವುದು ಎಂದು ಈ ಕಗ್ಗದಲ್ಲಿ ಕರ್ಮ ಪರಿವರ್ತನೆಯ ವೃತ್ತಾಂತವನ್ನು ಉಲ್ಲೇಖಿಸಿದ್ದಾರೆ, ಮಾನ್ಯ ಗುಂಡಪ್ಪನವರು, ಈ ಕಗ್ಗದಲ್ಲಿ.
"The mountain is old and so is the earth. But rain water does erode them and adds fresh water to the pond. Just like that human effort will erode the baggages of previous births (consequences of actions then) and will lead to man's prosperity." - Mankutimma
Video Coming Soon
Detailed video explanations by scholars and experts will be available soon.