Mankutimmana Kagga by D.V. Gundappa
ಟಗರೆರಡ ಬೆಳಸಿ ಕೊಬ್ಬಿಸಿ ಕೆಣಕಿ ಹುರಿಗೊಳಿಸಿ । ಜಗಳವಾಡಿಸಿ ದೈವಜೀವಗಳ ಪೆಸರಿಂ ॥ ನಗುತಲಿರುವನು ನೋಡಿ; ಪರಬೊಮ್ಮನೇಂ ಬಿನದಿ! । ಬಿಗಿಯದಿರು ನೀಂ ಬೀಗಿ - ಮಂಕುತಿಮ್ಮ ॥ ೧೬೨ ॥
Tagaru erada beLasi kobbisi keNaki hurigoLisi । jagaLavADisi daiva jIvagaLa pesarim ॥ nagutaliruvanu nODi; parabommanEm binadi! । bigiyadiru nIm bIgi - Mankutimma ॥ 162 ॥
ವಿಧಿಯ ರೂಪದಲ್ಲಿ ಆ ದೈವ ಮತ್ತು ನಿನ್ನ ರೂಪದಲ್ಲಿ ಈ ಜೀವ ಇವೆರಡನ್ನೂ ಕೊಬ್ಬಿದ ಟಗರುಗಳಂತೆ ಬೆಳೆಸಿ ಒಂದು ಇನ್ನೊಂದರ ಮೇಲೆ ಸೆಣಸಾಡಿಸುತ್ತಾ, ಆ ಪರಮಾತ್ಮ ನಗುತ್ತಿದ್ದಾನೆ. ನೀನು ನಿನ್ನ ಅಹಂಕಾರದಿಂದ ಗರ್ವ ಪಡದಿರು, ಎಂದು ಗುಂಡಪ್ಪನವರು ಒಂದು ಸಂದೇಶ ಮತ್ತು ಒಂದು ಆದೇಶವನ್ನು ಕೊಡುತ್ತಾರೆ ಈ ಕಗ್ಗದಲ್ಲಿ.
"God has reared two fighting goats. He has fed them well. He provokes them, eggs them to fight against each other. These goats symbolizes fate(providence) and human effort. He is watching the fight and laughing. There are no winners in this game even though at times either of the goats may feel good. You be wary of feeling proud of your own accomplishments." - Mankutimma
Video Coming Soon
Detailed video explanations by scholars and experts will be available soon.