Back to List

Kagga 161 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವಿಧಿಯ ಹೊರೆಗಳನು ತಪ್ಪಿಸಿಕೊಳುವನೆಲ್ಲಿಹನು? । ಬೆದರಿಕೆಯನದರಿಂದ ನೀಗಿಪನು ಸಖನು ॥ ಎದೆಯನುಕ್ಕಾಗಿಸಾನಿಸು ಬೆನ್ನ, ತುಟಿಯ ಬಿಗಿ । ವಿಧಿಯಗಸ, ನೀಂ ಕತ್ತೆ - ಮಂಕುತಿಮ್ಮ ॥ ೧೬೧ ॥

vidhiya horegaLanu tappisikoLuvanu ellihanu? । bedarikeyanu adarinda nIgipanu sakhanu ॥ edeyanu ukkAgisu Anisu benna, tuTiya bigi । vidhiyu agasa, nIm katte - Mankutimma ॥ 161 ॥

Meaning in Kannada

ಈ ಜಗತ್ತಿನಲ್ಲಿ ಅನಾದಿಕಾಲದಿಂದಲೂ ಹುಟ್ಟಿದವರು ಮತ್ತು ಕಾಲವಾದವರು ಯಾರೂ ಸಹ ಈ ವಿಧಿಯು ಹೇರಿಸುವ ಹೊರೆಗಳ ಭಾರಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಈ ಹೊರೆಯನ್ನು ಹೊರುವ ಹೆದರಿಕೆಯನ್ನು ನೀಗಿಸುವವನೇ ನಮ್ಮ ನಿಜವಾದ ಸ್ನೇಹಿತ. ನಮ್ಮ ಮನಸ್ಸನ್ನು( ಎದೆಯನ್ನು) ಕಬ್ಬಿಣದಂತೆ ಗಟ್ಟಿಯಾಗಿಸಿ, ಬೆನ್ನ ಮೇಲೆ ಹೊರೆ ಹೊತ್ತು, ತುಟಿಪಿಟಕ್ಕೆನ್ನದೆ ಮುಂದೆ ಸಾಗು. ಏಕೆಂದರೆ, ವಿಧಿಯು ಅಗಸನಾದರೆ ನೀನು ಕತ್ತೆಯಂತೆ ಎಂದು ಒಂದು ಸುಂದರ ಉಪಯೊಂದಿಗೆ ವಾಸ್ತವದ ಸತ್ಯವನ್ನು ಪ್ರಸ್ತಾಪಿಸಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

Meaning & Interpretation

"Where can one find a person who can escape from the clutches of providence? He who can help you get out of fear is a true friend. Harden your heart like iron, bend your back according to situations, shut your mouth - providence is the washerman and you are his donkey." - Mankutimma

Themes

DeathSocietyLove

Video Section

Video Coming Soon

Detailed video explanations by scholars and experts will be available soon.