Mankutimmana Kagga by D.V. Gundappa
ಕರವೆದಡದೃಷ್ಟಕ್ಕೆ; ನರನ ಪೂರ್ವಿಕವೊಂದು । ಪೆರತೊಂದು ನವಸೃಷ್ಟಿಸತ್ತ್ವವಾ ಬೊಗಸೆ ॥ ಧರಿಸಿಹುದು ಮನುಜಜೀವಿತವನದರೊತ್ತಡದೆ । ಪರಿದಾಟ ನಮಗೆಲ್ಲ - ಮಂಕುತಿಮ್ಮ ॥ ೧೫೮ ॥
karavu earaDu adRuShTakke; narana pUrvikavondu । peratondu navasRuShTi sattvavu A bogase ॥ dharisuhudu manuja jIvitavanu adara ottaDade । paridATa namagella - Mankutimma ॥ 158 ॥
ನಮ್ಮ ಪೂರ್ವಜನ್ಮದ ರೇಖೆಗಳನ್ನು ಹೊತ್ತ ಎಡಗೈ ಮತ್ತು ನಮ್ಮ ಈ ಜನ್ಮದ ಆಗು ಹೋಗುಗಳನ್ನು ಬಿತ್ತರಿಸುವ ನಮ್ಮ ಬಲಗೈಯ ರೇಖೆಗಳು . ಎರಡು ಕೈಗಳು. ಈ ಎರಡೂ ಕೈಗಳನ್ನು ಜೋಡಿಸಿದಾಗ ಒಂದು ಬೊಗಸೆಯಾಗುತ್ತದೆ. ಈ ಬೊಗಸೆಯಿಂದ ನಾವು ಹೊಸ ಹೊಸ ಕೆಲಸವನ್ನು ಮಾಡುತ್ತಾ ಇಲ್ಲಿನ ಒತ್ತಡಗಳನ್ನು ಅನುಭವಿಸುತ್ತಾ ನಾವು ಪರದಾಡುತ್ತಿರುತ್ತೇವೆ ಎಂದು ಉಲ್ಲೇಖ ಮಾಡಿದ್ದಾರೆ ಮಾನ್ಯ ಗುಂಡಪ್ಪನವರು.
"Luck is supported by two hands. Man's prior actions is one of them. The other is the cosmic spirit that is pumping freshness into theis world. These hands make a cup and hold our precious life in it. Our life is a struggle based on how tightly they hold (squeeze)" - Mankutimma
Video Coming Soon
Detailed video explanations by scholars and experts will be available soon.