Mankutimmana Kagga by D.V. Gundappa
ಪರಬೊಮ್ಮನಾ ವಿಧಿಯ ನೇಮಿಸಿಹುದೇತಕೆನೆ । ನರಜಾತಿ ಸಾನುಭೂತಿಯ ಕಲಿಯಲೆಂದು ॥ ಪರರೆಂಬರಿಲ್ಲ ಆತ್ಮಾಂಶರೆಲ್ಲರೆನಿತ್ತೆ । ಬೆರೆ ನೀನು ವಿಶ್ವದಲಿ - ಮಂಕುತಿಮ್ಮ ॥ ೧೫೭ ॥
parabommanA vidhiya nEmisihudu Etakene । narajAti sAnubhUtiya kaliyalendu ॥ pararembarilla AtmAmsharellarenitte । bere nInu vishvadali - Mankutimma ॥ 157 ॥
ಆ ಪರಬ್ರಹ್ಮನು ಆ “ವಿಧಿ”ಯನ್ನು ಏಕೆ ನೇಮಿಸಿದ್ದಾನೆ ? ಎಂದರೆ, ಮನುಷ್ಯರು ಪರಸ್ಪರ ಸಹಾನುಭೂತಿಯನ್ನು ಕಲಿಯಲಿ ಎಂದು ಮತ್ತು ಪರರು ಯಾರೂ ಇಲ್ಲ, ಎಲ್ಲರೂ ಆತ್ಮದ ಒಂದು ಅಂಶವೆಂದು ಅರಿತು ನೀನೂ ಬೆರೆತು ಈ ವಿಶ್ವದಲಿ ಬಾಳು ಎಂದು ಒಂದು ಆದೇಶವನ್ನು ನೀಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Why is the Creator appoint providence to play with our lives? To make mankind learn some compassion. To make mankind realize that there is effectively no difference between him and the other man when he is put against providence. To make man realize that there is a soul/life in every body which is as important as the one in him. Realize this and try to become one with the rest of the world. Don't live in a shell. " - Mankutimma
Video Coming Soon
Detailed video explanations by scholars and experts will be available soon.