Mankutimmana Kagga by D.V. Gundappa
ತೋಯಿಸುತ ಬೇಯಿಸುತ ಹೆಚ್ಚುತ್ತ ಕೊಚ್ಚುತ್ತ । ಕಾಯಿಸುತ ಕರಿಯುತ್ತ ಹುರಿಯುತ್ತ ಸುಡುತ ॥ ಈಯವನಿಯೊಲೆಯೊಳೆಮ್ಮಯ ಬಾಳನಟ್ಟು ವಿಧಿ । ಬಾಯ ಚಪ್ಪರಿಸುವನು - ಮಂಕುತಿಮ್ಮ ॥ ೧೫೬ ॥
tOyisuta bEyisuta hecchutta kocchutta । kAyisuta kariyutta huriyutta suDuta ॥ ee avaniya oleyoLu emmaya bALanaTTu vidhi । bAya chapparisuvanu - Mankutimma ॥ 156 ॥
ಈ ವಿಧಿ ಅನ್ನುವುದು ನಮ್ಮನ್ನು ಈ ಭೂಮಿ ಎನ್ನುವ ಒಲೆಯೊಳು, ನೆನೆಸುತ್ತ, ಬೇಯಿಸುತ, ಹೆಚ್ಚುತ್ತ , ಕೊಚ್ಚುತ್ತ, ಕಾಯಿಸುತ, ಕರಿಯುತ್ತ, ಹುರಿಯುತ್ತ, ಸುಡುತ್ತ, ನಮ್ಮನ್ನು ಆಡಿಸುತ್ತ, ತಾನು ಒಂದು ರುಚಿಯಾದ ಪಕ್ವಾನ್ನವನ್ನು ತಿಂದು ಆಸ್ವಾದಿಸುವನಂತೆ ಬಾಯಿ ಚಪ್ಪರಿಸುತ್ತಿದ್ದಾನೆ ಎಂದು ಒಂದು ಗಹನವಾದ ವಿಷಯವನ್ನು ವಿನೋದವಾಗಿ ಪ್ರಸ್ತಾಪಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Providence licking its lips to indicate its eagerness to eat us. He is cooking our lives on this stove called world - soaking, baking, increasing, cutting into poeces, heating over a pan, deep frying, dry frying, roasting us." - Mankutimma
Video Coming Soon
Detailed video explanations by scholars and experts will be available soon.