Mankutimmana Kagga by D.V. Gundappa
ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು । ತುಸಿರಾಗಿ ನಮ್ಮೊಳಾವಗಮಾಡುವಂತೆ ॥ ವಿಸರಸತ್ತ್ವಮದೊಂದದೆತ್ತಣಿನೊ ಬಂದು ನ । ಮ್ಮಸುಗಳೊಳವೊಗುತಿಹುದು - ಮಂಕುತಿಮ್ಮ ॥ ೧೫೫ ॥
shvasanu Agasadin iLidu adri guhegaLOLu aleyuta । usirAgi nammoLu Avaga mADuvante ॥ visara sattvamu adondu ettaNino bandu । namma asugaLoLuvogutihudu - Mankutimma ॥ 155 ॥
ನಮ್ಮ ಉಸಿರಾಗಿರುವ ಈ ಗಾಳಿಯು ಆಕಾಶದಿಂದ ಇಳಿದು, ಬೆಟ್ಟಗಳ ಮೇಲೆ ಬೀಸಿ, ಗುಹೆಗಳಲ್ಲಿ ನುಗ್ಗಿ, ಉಸಿರಾಗಿ ನಮ್ಮ ಒಡಲೊಳಗೆ ಆಡುವಂತೆ ಮಾಡುವ, ಒಂದು ವಿಸ್ತಾರ ಸತ್ವವು ಎಲ್ಲಿಂದಲೋ ಬಂದು ನಮ್ಮ ಪ್ರಾಣಗಳ ಒಳಗೆ ನುಗ್ಗುತ್ತಿದೆ ಎಂದು ಪ್ರಸ್ತಾಪಿಸ್ಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Air from the skies descends, wanders through the caves in the moutains and enters us in the form of breath. Just like that energy from the cosmic spirit enters us as life from somewhere." - Mankutimma
Video Coming Soon
Detailed video explanations by scholars and experts will be available soon.