Mankutimmana Kagga by D.V. Gundappa
ತಾಪಿಸುತೆ ತಣಿಯಿಸುತೆ ಕುಲುಕಿಸುತೆ ಋತುವೈದ್ಯ । ಭೂಪಟದಿ ಜೀವರಸಗಳ ಪಚಿಸುವಂತೆ ॥ ಪಾಪಿಯಂ ಪ್ರೋತ್ಸಹಿಸಿ ಸುಕೃತಿಯ ಪರೀಕ್ಷಿಸುತ । ವೇಪಿಪನು ವಿಧಿ ನಮ್ಮ - ಮಂಕುತಿಮ್ಮ ॥ ೧೫೯ ॥
tApisute taNiyisute kulukisute Rutuvaidya । bhUpaTadi jIvarasagaLa pachisuvante ॥ pApiyam protsahisi sukRutiya parIkShisuta । vEpipanu vidhi namma - Mankutimma ॥ 159 ॥
ಬಿಸಿಲಲ್ಲಿ ಸುಟ್ಟು, ಮಳೆಯಲ್ಲಿ ನೆನೆಸಿ, ಚಳಿಗಾಲದಲ್ಲಿ ನಡುಗಿಸಿ, ಋತು ಬದಲಾವಣೆಯಿಂದ ಈ ಭೂಮಿಯಲ್ಲಿ ಜೀವರಸಗಳ ಪಾಕ ಮಾಡಿ ಪಕ್ವ ಮಾಡುವಂತೆ, ನಮ್ಮನ್ನು ವಿಧಿಯು ಹಲಬಗೆಯ ಪರೀಕ್ಷೆಗಳಿಗೊಡ್ಡಿ, ದುಷ್ಟನನ್ನು ಪ್ರೋತ್ಸಾಹಿಸಿ, ಒಳ್ಳೆಯಕೆಲಸ ಮಾಡುವವರನ್ನು ಇನ್ನೂ ಪರೀಕ್ಷೆಗೆ ಒಳಪಡಿಸುತ್ತಾ, ನಮ್ಮನ್ನು ನಡುಗಿಸುತ್ತಾನೆ ಎನ್ನುವುದೇ ಈ ಕಗ್ಗದ ಹೂರಣ.
"God who created the seasons is making life possible by cooking the elements of the earth - heating, cooling, shaking it. Similarly the providence is playing a similar game with our lives. Sometimes it supports bad guys and scutinizing the good deeds. It has us completely under its control." - Mankutimma
Video Coming Soon
Detailed video explanations by scholars and experts will be available soon.