Mankutimmana Kagga by D.V. Gundappa
ಪ್ರಕೃತಿಯಿಂ ಪೊರಗಿರುವ ನರನಾರು ಸೃಷ್ಟಿಯಲಿ? । ಸ್ವಕೃತಿಯೆಂದವನೆನುವುದವಳಿರದೊಡಿರದು ॥ ಸುಕೃತವೆನಿಸುವುದವಳ ನೀಂ ವಶಕೆ ಕೊಳುವ ನಯ । ವಿಕೃತಿಗೆಡೆಯಾಗದಿರೊ - ಮಂಕುತಿಮ್ಮ ॥ ೧೪೮ ॥
prakRutiyim poragiruva naranAru sRuShTiyali? । svakRutiyendu avanenuvudu avaLiradoDiradu ॥ sukRutavenisuvudu avaLa nIm vashake koLuva naya । vikRutigeDeyAgadiro - Mankutimma ॥ 148 ॥
ಈ ಜಗತ್ತಿನ ಪ್ರಕೃತಿಯ ಪ್ರಭಾವದಿಂದ ಹೊರೆಗೆ ಇರುವ ಮನುಷ್ಯ ಯಾರು. ಯಾರಾದರೂ ಇದನ್ನು ನಾನು ಮಾಡಿದ್ದು ಎಂದರೂ ಸಹ ಪ್ರಕೃತಿಯ ಪ್ರಭಾವದಲ್ಲೇ ಮಾಡಿರಬೇಕಲ್ಲವೇ? ಆದರೆ ಪ್ರಕೃತಿಯ ಪ್ರಭಾವದಲ್ಲಿ ಇದ್ದರೂ ಸಂಪೂರ್ಣ ಅದರ ವಶವಾಗದೆ, ತನ್ನ ಪ್ರತಿಭೆಯಿಂದ ಮಾಡುವ ಕೆಲಸವನ್ನು ಒಳ್ಳೆಯಕೆಲಸವೆನ್ನುತ್ತಾರೆ. ಆದರೆ ಕೆಲಸಮಾಡುವಾಗ ಸಂಪೂರ್ಣ ಪ್ರಕೃತಿಯ ಪ್ರವಾಕ್ಕೆ ಒಳಗಾಗಿ, ಕೆಲಸ ಕೆಡಿಸಿಕೊಳ್ಳದೆ ಅಂದರೆ ಅದನ್ನು ವಿಕ್ರುತಗೊಳಿಸದೆ ಕೆಸಲವನ್ನು ಮಾಡೋ ಎಂದು ನಮಗೆ ಒಂದು ಎಚ್ಚರಿಕೆಯನ್ನು ನೀಡಿದ್ದಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"Who can claim that he is outside nature? What can he create that does not have nature's contribution in it? It is best when man surrenders himself to nature and makes best use of her. Don't be an aberration in nature." - Mankutimma
Video Coming Soon
Detailed video explanations by scholars and experts will be available soon.