Mankutimmana Kagga by D.V. Gundappa
ಮಾಯೆಯೊಮ್ಮೊಮ್ಮೆ ತೋರುವಳು ಮಿಗಿಲಕ್ಕರೆಯ । ಮಾಯಿಪಳು ಗಾಯಗಳನೀವಳಿಷ್ಟಗಳ ॥ ಮೈಯ ನೀಂ ಮರೆಯೆ ನೂಕುವಳಾಗ ಪಾತಾಳಕೆ । ಪ್ರೇಯ ಪೂತನಿಯವಳು - ಮಂಕುತಿಮ್ಮ ॥ ೧೪೭ ॥
mAyeyu ommomme tOruvaLu migilakkareya । mAyipaLu gAyagaLanu IvaLu iShTagala ॥ maiya nIm mareye nUkuvaLu Aga pAtALake । prEya pUtaniyu avaLu - Mankutimma ॥ 147 ॥
ನಮಗೆ ಅರ್ಥವೇ ಆಗದ ಈ ಮಾಯೆಯ ಮತ್ತೊಂದು ಸ್ವರೂಪವನ್ನು ವಿವರಿಸುತ್ತಾ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ, ” ಆಗಾಗ ಈ ಮಾಯೆ ನಮ್ಮ ಮೇಲೆ ಅತೀ ಪ್ರೀತಿಯನ್ನು ತೋರಿ ನಮ್ಮ ದುಃಖಗಳನ್ನು ತೀರಿಸುವಂತೆ ಮಾಡಿ ನಮ್ಮ ಅಭೀಷ್ಟಗಳನ್ನು ತೀರಿಸುತ್ತಾಳೆ. ಆದರೆ ಆ ಸಂತೋಷದಲ್ಲಿ ನಾವೇನಾದರೂ ಮೈ ಮರೆತು ನಡೆದುಕೊಂಡೆವೋ, ತಕ್ಷಣವೇ ನಮ್ಮನ್ನು ಪಾತಾಳಕ್ಕೆ ತಳ್ಳಿ ಬಿಡುತ್ತಾಳೆ. “ಮೂಲತಃ ರಾಕ್ಷಸ ಗುಣವನ್ನು ಹೊಂದಿದವಳಾದರೂ ತಾನು ಸುಂದರ ರೂಪ ಧರಿಸಿ “ಕೃಷ್ಣ”ನಿಗೆ ವಿಷಪೂರಿತ ಹಾಲನ್ನು ಕುಡಿಸಲು ಪ್ರಯತ್ನಿಸಿದ ” ಪೂತನೆ”ಯಂತೆ” ಎಂದು ಬಹಳ ಸುಂದರವಾಗಿ ಒಂದು ಗಹನವಾದ ವಿಚಾರವನ್ನು ಪ್ರಸ್ತಾಪ ಮಾಡುತ್ತಾರೆ.
"Maya will shower you with care at one time. She will heal all your wounds and grant your wishes. If you lose your mind in the process of enjoyment, that is when she will push you to the underworld. She is a demon(Putani) in lovable costume." - Mankutimma
Video Coming Soon
Detailed video explanations by scholars and experts will be available soon.