Back to List

Kagga 146 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ರಾಯ ಮುದಿದಶರಥನಾಡಿಸುತ ಕೈಕೇಯಿ । ಸ್ವೀಯ ವಶದಲಿ ಕೋಸಲವನಾಳಿದಂತೆ ॥ ಮಾಯೆ ಬೊಮ್ಮನ ಬಿನದವಡಿಸಿ ನಮ್ಮೀ ಜಗವ । ಕಾಯುವಳು ತನ್ನಿಚ್ಛೆ - ಮಂಕುತಿಮ್ಮ ॥ ೧೪೬ ॥

rAya mudi dasharathana ADisuta kaikEyi । svIya vashadali kOsalavanu ALidante ॥ mAye bommana binadavaDisi nammI jagava । kAyuvaLu tannicChe - Mankutimma ॥ 146 ॥

Meaning in Kannada

ಇಲ್ಲಿ ಮಾನ್ಯ ಗುಂಡಪ್ಪನವರು ರಾಮಾಯಣದ ಒಂದು ಪ್ರಸಂಗವನ್ನು ತರುತ್ತಾರೆ. ದಾಸಿ ಮಂಥರೆಯ ಮಾತ ಕೇಳಿ, ತಾನು ಪಡೆದ ವರಗಳ ಬಲದಿಂದ, ತನ್ನ ಗಂಡನಾದ ಮುದುಕ ದಶರಥನನ್ನು, ಯುವರಾಜ ರಾಮನು ಪಟ್ಟಕ್ಕೇರದೆ ತನ್ನ ಮಗನಾದ ಭರತನು ರಾಜನಾಗಬೇಕೆಂಬ ಬಯಕೆಯ ಮುಂದಿಟ್ಟು, ತನ್ನ ಮೋಹದ ಬಲೆಯನ್ನು ಬೀಸಿ, ಅವನನ್ನು ಒಪ್ಪಿಸುತ್ತಾಳೆ. ದುಃಖಿತನಾದಾಗ್ಯೂ, ಅವಳ ಮೋಹದಲ್ಲಿ, ಅವಳಿಚ್ಚೆಯಂತೆ ರಾಜ್ಯಬಾರ ಮಾಡಲು ಬಿಡುತ್ತಾನೆ. ಹಾಗೆಯೆ ಪರಬ್ರಹ್ಮನನ್ನು ಆನಂದ ಪಡಿಸುತ್ತಾ, ಈ ಮಾಯೆಯಂಬ ಮಾಯಾಂಗನೆ ತನ್ನ ಇಚ್ಚೆಯಂತೆ ಈ ಜಗವನಾಳುತ್ತಿದ್ದಾಳೆ, ಎಂದು ಮಾಯೆಯ ಪ್ರಭಾವವನ್ನು ವಿವರಿಸುತ್ತಾರೆ, ಶ್ರೀ ಗುಂಡಪ್ಪನವರು. ಇರಲಿ ಅಮೇಯವಾದ ಮಾಯೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮನ್ನು ಭ್ರಮಾ ಲೋಕಕ್ಕೆ ತಳ್ಳುತ್ತದೆ. ಅಲ್ಲೂ ಸಹ ದಶರಥನು” ಇಲ್ಲ ಸಾಧ್ಯವಿಲ್ಲ” ಎಂದಿದ್ದಿದ್ದರೆ ರಾಮಾಯಣವೇ ನಡೆಯುತ್ತಿರಲಿಲ್ಲ. ಹಾಗೆಯೇ ನಮ್ಮ ಜೀವನಗಳಲ್ಲೂ ನಾವು ಎಷ್ಟೋ ಬಾರಿ ಅಂತಹ ಭ್ರಮೆಗಳಿಗೆ ತುತ್ತಾಗಿ, ಆ ಕ್ಷಣದಲ್ಲಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡು ನಂತರ ಧೀರ್ಘಕಾಲ ಪರದಾಡು ವಂತಾ ಸ್ಥಿತಿಗೆ ಬೀಳುವುದಿಲ್ಲವೇ? ಹಾಗೆ. 

Meaning & Interpretation

"Kaikeyi ruled the Kosala kingdom the way she wanted, with total independence because she amused the old king Dasharatha. Maya seems to be running our world as she pleases by amusing the creator." - Mankutimma

Themes

LifeDeathMorality

Video Section

Video Coming Soon

Detailed video explanations by scholars and experts will be available soon.