Back to List

Kagga 145 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮಾಯೆಯೇ ಸರಸಿ; ನಿರ್ಗುಣ ಸತ್ತ್ವದಿಂದೇನು? । ಮಾಯೆ ಬಿಡೆ ಜಗವೆತ್ತ? ಜೀವಕಥೆಯೆತ್ತ? ॥ ಮೇಯವಲ್ಲದ ಮಹಿಮೆ ಛಾಯೆಯಾ ಬ್ರಹ್ಮನದು । ತಾಯವಳು ನೀಂ ಮಗುವು - ಮಂಕುತಿಮ್ಮ ॥ ೧೪೫ ॥

mAyeyE sarasi; nirguNa sattvadindEnu? । mAye biDe jagavetta? jIvakatheyetta? ॥ mEyavallada mahime ChAyeyA brahmanadu । tAyi avaLu nIm maguvu - Mankutimma ॥ 144 ॥

Meaning in Kannada

ನಮ್ಮ ಜೀವನದ ಜೊತೆಗೆ ಸರಸವಾಡುವ ಆ ಸರಸಿಯೇ ಈ ಮಾಯೆ. ಗುಣ ರಹಿತವಾದ ಸತ್ವದಿಂದ ಏನು ಪ್ರಯೋಜನ. ಈ ಮಾಯೆಯೇ ಇಲ್ಲದೆ ಹೋದರೆ ಈ ಜಗತ್ತಿನಲ್ಲಿ ವೈವಿಧ್ಯತೆ ಇಲ್ಲದೆ ಸ್ವಾರಸ್ಯವೇ ಇಲ್ಲದೆ ಹೋಗುತ್ತಿತ್ತು. ಅರ್ಥವಾಗದ ( ಮೇಯವಲ್ಲದ) ಈ ಮಾಯೆಯಾ ಮಹಿಮೆ ಆ ಸೃಷ್ಟಿಕರ್ಣ ಬ್ರಹ್ಮನ ಛಾಯೆ (ನೆರಳು) ಈ ಮಾಯೆ ತಾಯಿ ಇದ್ದ ಹಾಗೆ ನಾವೆಲ್ಲಾ ಅವಳ ಮಕ್ಕಳಂತೆ ಎಂದು ಒಂದು ಸ್ವಾರಸ್ಯಕರ ವಿಷಯವನ್ನು ಈ ಕಗ್ಗದಲ್ಲಿ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು. 

Meaning & Interpretation

"Maya takes interest in indulging. What use would the purity of the cosmic essence be for us? If the illusion is lifted, would the world be as interesting? Would there by the mesmerizing story of life? This illusion is just a reflection of the cosmic spirit. She is the mother and you are the child. There is no existence without the illusion." - Mankutimma

Themes

LifePeace

Video Section

Video Coming Soon

Detailed video explanations by scholars and experts will be available soon.