Mankutimmana Kagga by D.V. Gundappa
ವಾಯುವಂ ಕಾಣ್ಬನಾರ್? ತತ್ಕ್ರಿಯೆಯ ಕಾಣನಾರ್? । ಮಾಯೆಯಂತಪರೀಕ್ಷ್ಯಸತ್ತ್ವದೀಕ್ಷ್ಯಕೃತಿ ॥ ರಾಯನಂ ಕಾಣಲಾಗದೆ ಮಂತ್ರಿಯೆಡೆಸಾರ್ವ । ದೇಯಾರ್ಥಿಯೊಲು ನೀನು - ಮಂಕುತಿಮ್ಮ ॥ ೧೪೪ ॥
vAyuvam kANbanAr? tatkriyeya kANanAr? । mAyeyayante aparIkShya sattvada IkShya kRuti ॥ rAyanam kANalAgade mantriyaDe sArva । dEyArthiyolu nInu - Mankutimma ॥ 144 ॥
ಗಾಳಿಯನ್ನು ನೋಡಿದವರು ಯಾರು. ಆದರೆ ಅದರ ಕ್ರಿಯೆಯನ್ನು ಅನುಭವಿಸದವರಾರು. ಮಾಯೆಯನ್ನು ಪರೀಕ್ಷಿಸಲು ಸಾಧ್ಯವಿಲ್ಲ. ಆದರೆ ಆ ಪರಮಾತ್ಮನ ಕ್ರಿಯೆಯನ್ನು ನಾವು ನೋಡಬಹುದು ಆದರೆ ರಾಜನನ್ನು ನೋಡಲಾಗದೆ ಅವನ ಸೇವಕ ಮಂತ್ರಿಯ ಬಳಿ ಹೋಗಿ ಬೇಡುವವನಂತೆ ನೀ ಇದ್ದೀಯೇ ಎಂದು ಮಾನ್ಯ ಗುಂಡಪ್ಪನವರು ತಮ್ಮನ್ನೇ ತಾವು ಹೇಳಿಕೊಳ್ಳುತ್ತಾ ನಮ್ಮ ಸ್ಥಿತಿಯೂ ಹಾಗೆ ಇದೆ ಎಂದು ಸೂಚ್ಯವಾಗಿ ಹೇಳುತ್ತಾರೆ.
"Who has seen air? Who has not seen the effects of air (wind)? Just like that maya (the illusion) is the measurable manifestation of the immeasurable essence of the cosmic spirit. When a petitioner can not see the king, he laments in front of the minister." - Mankutimma
Video Coming Soon
Detailed video explanations by scholars and experts will be available soon.