Mankutimmana Kagga by D.V. Gundappa
ಧಾತ್ರಿಯನು ಮದುವೆಮಂಟಪದವೊಲು ಸಿಂಗರಿಸಿ । ಕ್ಷಾತ್ರದಗ್ನಿಗಳ ನರಹೃದಯಗಳೊಳಿರಿಸಿ ॥ ಕೃತ್ರಿಮವನೆಡೆಬಿಡದೆ ನೆಡಸಿ ನಗುವ ವಿಲಾಸಿ । ಚಿತ್ರಕಾರಿಯೊ ಮಾಯೆ - ಮಂಕುತಿಮ್ಮ ॥ ೧೪೩ ॥
dhAtriyanu maduve manTapadavolu singarisi । kShAtrada agnigaLa nara hRudayagaLoLu irisi ॥ kRutrimavanu eDebiDade naDasi naguva vilAsi । chitrakAriyo mAye - Mankutimma ॥ 143 ॥
ಈ ಧರಣಿಯನ್ನು ಮನುಷ್ಯನ ಕಣ್ಣಿಗೆ ಸುಂದರವಾಗಿ ಕಾಣುವಂತೆ, ಮದುವೆ ಮಂಟಪದಂತೆ ಸಿಂಗರಿಸಿ, ಇದರೊಳಗೆ ಸಂಪೂರ್ಣವಾಗಿ ತನ್ನನ್ನು ತಾನು ತೊಡಗಿಸಿಕೊಳ್ಳಲು ಬೇಕಾದ ಆಸ್ಥೆ ಮತ್ತು ಆಸೆಯನ್ನು ಅವನ ಹೃದಯದಲ್ಲಿ ತುಂಬಿ ಸತ್ಯವನ್ನು ಮರೆಸಿ ಕೇವಲ ಅಸಹಜತೆಯನ್ನು ಮೆರೆಯುವಂತೆ ಮಾಡಿರುವ ಮತ್ತು ನೋಡಿ ನಗುತ್ತಿರುವ “ಮಾಯೆ” ಒಂದು ಸುಂದರ ಚಿತ್ರಕಾರಿಯೋ ಎಂದು ಒಂದು ಗಹನವಾದ ವಿಷಯವನ್ನು ಪ್ರಸ್ತಾಪಿಸುತ್ತಾರೆ, ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.
"She has decorated the earth like a wedding reception and implanted restlessness in the heart of a man. She is keeping up the illusion without any break. Maya is the smiling artist amused at her own act." - Mankutimma
Video Coming Soon
Detailed video explanations by scholars and experts will be available soon.