Back to List

Kagga 142 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಮೂಲವಸ್ತುವದೊಂದು ಲೀಲೆಗೋಸುಗ ನೂರು । ಕಾಲದೃಷ್ಟಿಗೆ ಬಹುಳ ಕೇವಲದೊಳೇಕ ॥ ಸ್ಥೂಲವಿವಿಧದಿ ಬಾಳಿ ಸೂಕ್ಷ್ಮಸಾಮ್ಯವ ತಾಳಿ । ಆಳುತಿರು ಜೀವನವ - ಮಂಕುತಿಮ್ಮ ॥ ೧೪೨ ॥

mUlavastuvu adondu lIlegosuga nUru । kAla dRuShTige bahuLa kEvaladoLu Eka ॥ sthUla vividhadi bALi sUkShma sAmyava tALi । ALutiru jIvanava - Mankutimma ॥ 142 ॥

Meaning in Kannada

ಇಡೀ ಜಗತ್ತಿನ ಮೂಲ ವಸ್ತುವು ಒಂದೇ. ಆ ಪರಮಾತ್ಮ ತನ್ನ ಲೀಲಾ ವಿನೋದಕಾಗಿ ತನ್ನನ್ನೇ ತಾನು ಹಲವಾಗಿಸಿಕೊಂಡಿದ್ದಾನೆ. ಕಾಲದ ನೋಟಕ್ಕೆ ಬಹಳವಾಗಿ ಕಂಡರೂ ಅದು ಕೇವಲ ಒಂದೇ. ಸ್ಥೂಲವಾಗಿ ನೋಡಿದಾಗ ಹಲವಾಗಿ ಬಾಳಿದರೂ ಸೂಕ್ಷ್ಮ ರೂಪದಿ ನೋಡಿದಾಗ ಜಗತ್ತಿನ ಎಲ್ಲ ವಸ್ತುಗಳಲ್ಲೂ ಸಾಮ್ಯತೆಯನ್ನು ತೋರುತ್ತಾ ಆ ಆತ್ಮನೇ ಆಳುತ್ತಿದ್ದಾನೆ, ಎಂದು ಪ್ರಸ್ತಾಪಿಸುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ. 

Meaning & Interpretation

"The ultimate truth (essence) is one. So the sake of spicing it up, it takes up hundred forms. If you splice the existence based on time, they are all different. But if watched in totality of space and time, they are all one and the same. One must lead the life in this coarse world which is compartmentalized. But he must understand the subtlety of the one-ness in this world. Only then will he be on top of his life." - Mankutimma

Themes

WisdomLife

Video Section

Video Coming Soon

Detailed video explanations by scholars and experts will be available soon.