Back to List

Kagga 135 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಸಂಪೂರ್ಣಗೋಳದಲಿ ನೆನೆದೆಡೆಯೆ ಕೇಂದ್ರವಲ । ಕಂಪಿಸುವ ಕೇಂದ್ರ ನೀಂ ಬ್ರಹ್ಮಕಂದುಕದಿ ॥ ಶಂಪಾತರಂಗವದರೊಳು ತುಂಬಿ ಪರಿಯುತಿದೆ । ದಂಭೋಳಿ ನೀನಾಗು - ಮಂಕುತಿಮ್ಮ ॥ ೧೩೫ ॥

sampUrNa gOLadali nenedeDeye kEndravala । kampisuva kEndra nIm brahma kandukadi ॥ shampA tarangavu adaroLu tumbi pariyutide । dambhOLi nInAgu - Mankutimma ॥ 135 ॥

Meaning in Kannada

ಈ ಭೂಮಿಯಲ್ಲಿ ಪ್ರತಿಯೊಂದು ಕಣ ಕಣವೂ ಮಿಂಚಿನ ತರಂಗಗಳ ಕೇಂದ್ರ ಬಿಂದುವಿನನತೆ. ಬ್ರಹ್ಮ ಸೃಷ್ಟಿಮಾಡಿದ ಈ ಭೂಮಂಡಲದಲ್ಲಿ ನೀನೂ ಸಹ ಒಂದು ಕೇಂದ್ರ ಬಿಂದು. ನಿನ್ನಲ್ಲೂ ಮಿಂಚಿನ ತರಂಗಗಳು ಹರಿಯುತ್ತಿವೆ. ಹೀಗೆ ಹರಿಯುವ ಎಲ್ಲ ತರಂಗಗಳನ್ನೂ ಒಟ್ಟುಮಾಡಿ ನಿನ್ನ ಬುಧ್ದಿಯನ್ನು ವಜ್ರಾಯುಧವನ್ನಾಗಿಸಿಕೊಂಡು ಸಾಧನೆಯನ್ನು ಮಾಡು ಎಂದು ವಾಚಕರೆಗೆ ಒಂದು ಸೂಚನೆಯನ್ನು ನೀಡಿದ್ದಾರೆ ಈ ಕಗ್ಗದಲ್ಲಿ ಮಾನ್ಯ ಗುಂಡಪ್ಪನವರು.

Meaning & Interpretation

"In this spherical universe any point you pick can be assumed to be the center. In this cosmic boiler, you (and every body else) are the ever changing center (of your own world). There is lightning like energy overflowing in the boiler. It is for us to tap into the energy and make good use. You must be like the Dhambholi lightning. (which is a lightning from Vajrayudha of Indra)" - Mankutimma

Themes

LifeMoralityNature

Video Section

Video Coming Soon

Detailed video explanations by scholars and experts will be available soon.