Back to List

Kagga 136 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ವಿಶ್ವಪರಿಧಿಯದೆಲ್ಲೊ ಸೂರ್ಯಚಂದ್ರರಿನಾಚೆ । ವಿಶ್ವಕೇಂದ್ರವು ನೀನೆ, ನೀನೆಣಿಸಿದೆಡೆಯೆ ॥ ನಿಃಶ್ವಸಿತ ಸಂಬಂಧ ನಿನಗಂ ದಿಗಂತಕಂ । ಪುಷ್ಪವಾಗಿರು ನೀನು - ಮಂಕುತಿಮ್ಮ ॥ ೧೩೬ ॥

vishva paridhiyadello sUrya chandrarinAche । vishva kEndravu nIne, nIneNisideDege ॥ niHshvasita sambandha ninagam digantakam । puShpavAgiru nInu - Mankutimma ॥ 136 ॥

Meaning in Kannada

ನೀನು ಒಂದು ಕೇಂದ್ರ ಬಿಂದು. ಇಡೀ ವಿಶ್ವದ ಪರಿಧಿಯಲ್ಲಿ, ಸೂರ್ಯ ಚಂದ್ರರಿಗೂ ಆಚೆ ನೀನು ಎಲ್ಲಿ ನಿಂತರೆ ಅಲ್ಲಿ ನೀನು ಒಂದು ಬಿಂದುವಾಗಿರುವೆ. ನಿನಗೂ ದಿಗಂತಕ್ಕೂ ನಿನ್ನ ಉಸಿರಾಟದ ಸಂಬಂಧವಿದೆ. ಹಾಗಾಗಿ ನೀನು ನಿನ್ನ ಶಕ್ತಿಯ ಸುಗಂಧವನ್ನು ಎಲ್ಲೆಡೆ ಹರಡು ಎಂದು ಒಂದು ಆದೇಶವನ್ನು ಕೊಡುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"The outer limit to this universe is somewhere beyond the sun and the moon. We can not know that. But for you, you can be the center of the universe and you can be where ever you want. The reach of your universe is as much as you can exhale (as far as you can think, as far as your fame/influence can reach). You must be like a fragrant flower which is very small, but has its influence far-reaching becuase of its fragrance." - Mankutimma

Themes

Nature

Video Section

Video Coming Soon

Detailed video explanations by scholars and experts will be available soon.