Back to List

Kagga 121 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ತನುವೇನು? ಮನವೇನು? ಪರಮಾಣು ಸಂಧಾನ । ಕುಣಿಸುತಿಹುದುಭಯವನು ಮೂರನೆಯದೊಂದು ॥ ತೃಣದ ಹಸಿರಿನ ಹುಟ್ಟು ತಾರೆಯೆಸಕದ ಗುಟ್ಟು । ದಣಿಯದದನರನು ನೀಂ - ಮಂಕುತಿಮ್ಮ ॥ ೧೨೧ ॥

tanuvEnu? manavEnu? paramANu sandhAna । kuNisutihudu ubhayavanu mUraneyadondu ॥ tRuNada hasirina huttu tAreyesakada guttu । daNiyadu adanu arasu anu nIm - Mankutimma ॥ 121 ॥

Meaning in Kannada

ದೇಹವೇನು ಮನಸ್ಸೇನು, ಎರಡೂ ಸಹ ಪರಮಾಣುಗಳ ಅನುಸಂದಾನದಿಂದ ಕಾರ್ಯಪ್ರವೃತ್ತವಾಗಿವೆ. ಆದರೆ ಇವರೆಡನ್ನೂ ಸಂಧಿ ಮಾಡಿ ಆಡಿಸುತಿರುವುದು ಆ ಮೂರನೆಯ ಪರಮ ಶಕ್ತಿ. ಹುಲ್ಲಿನ ಹಸಿರಿಗೂ, ತಾರೆಯ ಮಿನುಗುವಿಕೆಗೂ ಕಾರಣವೇನೆಂಬುದನ್ನು ನೀ ಹುಡುಕು ಎಂದು ಒಂದು ಆದೇಶವನ್ನು ಮಾನ್ಯ ಗುಂಡಪ್ಪನವರು ನಮಗೆ ಈ ಕಗ್ಗದಲ್ಲಿ ಕೊಟ್ಟಿದಾರೆ.

Meaning & Interpretation

"What is a body? What is mind? Both are just a specific arrangement of atoms. Both of these are controlled by a third force. That force is behind the greeness of the grass, the sparkle of the stars.You must search for that spirit without getting tired."- Mankutimma

Themes

Video Section

Video Coming Soon

Detailed video explanations by scholars and experts will be available soon.