Back to List

Kagga 120 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ಪಾಕ ನಿನ್ನೊಳದೊಂದು ಸಾಗುತಿಹುದೆಡೆಬಿಡದೆ । ಲೋಕದೆಲ್ಲವು ಸೂಕ್ಷ್ಮಗತಿಯಿನೊಳವೊಕ್ಕು ॥ ಸಾಕುಬೇಕುಗಳೆಲ್ಲವದರಿನಾ ಯಂತ್ರವನು । ಏಕೆ ರಚಿಸಿದನೊ ವಿಧಿ! - ಮಂಕುತಿಮ್ಮ ॥ ೧೨೦ ॥

paka ninnoLadondu sAgutihudu eDebiDade । lOkadellavu sUkShmagatiyin oLavokku ॥ sAkubEkugaLellavadu arinA yantravanu । Eke rachisidano vidhi! - Mankutimma ॥ 120 ॥

Meaning in Kannada

ಒಂದು ಪಾಕ ಸಿದ್ಧವಾಗುವ ರೀತಿಯಲ್ಲಿ ಮನಸ್ಸು ಬುದ್ಧಿಗಳು ದೇಹದೊಡನೆ ಸೇರಿ ನಿನ್ನೊಳು ಸೂಕ್ಷ್ಮಗತಿಯಲ್ಲಿ ಈ ಜಗದ್ವ್ಯಾಪಾರವೇ ನಡೆಯುತ್ತಿದೆ. ಕೆಲವನ್ನು ಬೇಕೆನ್ನುವ ಕೆಲವನ್ನು ಸಾಕೆನ್ನುವ. ಇಂದು ಬೇಡವೆಂದದ್ದನ್ನು ನಾಳೆ ಬೇಕೆನ್ನುವ ಎಂದೋ ಇಷ್ಟಪಟ್ಟದ್ದನ್ನು ಇಂದು ಅಸಹ್ಯಿಸಿಕೊಳ್ಳುವ , ಈ ಮನುಷ್ಯದೇಹದ ಯಂತ್ರವನ್ನು ಹೀಗೇಕೆ ರಚಿಸಿದನೋ ವಿಧಿ ಎಂದು ಒಂದು ಪ್ರಶ್ನೆಯನ್ನು ಹಾಕುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"The body is an amazing machinery. There is a incessasant process of assimilation that goes on inside it. Everything in this world gets into it in a subtle way (through ingesting or through our senses). Once in, it has mechanism to make us want more or enough of perticular things. Why providence created such a wonderful machine!!" - Mankutimma

Themes

Life

Video Section

Video Coming Soon

Detailed video explanations by scholars and experts will be available soon.