Back to List

Kagga 119 - Mankutimmana Kagga

Mankutimmana Kagga by D.V. Gundappa

Original Text (ಕನ್ನಡ)

ನಾವುಣ್ಣುವನ್ನಗಳು ನಾವು ಕುಡಿವುದಕಗಳು । ನಾವುಸಿರುವೆಲರುಗಳು ನಾವುಡುವ ವಸ್ತ್ರ ॥ ಭೂವ್ಯೋಮಗಳ ಯಂತ್ರ ಸಂಘದುತ್ಪನ್ನಗಳು । ಜೀವವೆರಡರ ಶಿಶುವು - ಮಂಕುತಿಮ್ಮ ॥ ೧೧೯ ॥

nAvuNNuva annagaLu nAvu kuDiva udakagaLu । nAvu usiruva elarugaLu nAvu uDuva vastra ॥ bhU vyOmagaLa yantra sanghada utpannagaLu । jIva eraDara shishuvu - Mankutimma ॥ 119 ॥

Meaning in Kannada

ನಾವು ತಿನ್ನುವ ಆನ್ನ, ನಾವು ಕುಡಿಯುವ ನೀರು ನಾವು ಉಸಿರಾಡುವ ಗಾಳಿ ನಾವು ಉಡುವ ಬಟ್ಟೆ ಎಲ್ಲವೂ ಆಕಾಶ ಮತ್ತು ಭೂಮಿಯ ಪರಸ್ಪರ ಸಮ್ಮಿಲನದಿಂದ ತಯಾರಿಸಲ್ಪಡುವ ಉತ್ಪನ್ನಗಳು. ನಮ್ಮಲ್ಲಿ ಇರುವ ಚೇತನವೂ ಸಹ ಈ ಭೂಮಿ ಮತ್ತು ಆಕಾಶಗಳ ಶಿಶುವೆ ಎನ್ನುತ್ತಾರೆ ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ.

Meaning & Interpretation

"The food we eat, the water we drink, the air we breathe, the clothes we wear; are all works of complex machinery in this earth and cosmic space. Life is a result of both of them; earth providing material and the cosmic outer space providing the energy." - Mankutimma

Themes

LifeNatureDuty

Video Section

Video Coming Soon

Detailed video explanations by scholars and experts will be available soon.