Mankutimmana Kagga by D.V. Gundappa
ಜನಿಸಿದುದು ಮೃತಿಯನೆಳಸದೆ ಕುಲವ ಬೆಳಸುವುದು । ಒಣಗಿದಂತಿರುವ ತೃಣಮೂಲ ಮೊಳೆಯುವುದು ॥ ಮನುಜರಳಿವರು ಮನುಜಸಂತಾನ ನಿಂತಿಹುದು । ಅಣಗದಾತ್ಮದ ಸತ್ತ್ವ - ಮಂಕುತಿಮ್ಮ ॥ ೧೨೨ ॥
janisidudu mRutiyanELasade kulava beLasuvudu । oNagidantiruva tRuNamUla moLeyuvudu ॥ manujaru aLivaru manujasantAna nintihudu । aNagadu Atmada sattva - Mankutimma ॥ 122 ॥
ಹುಟ್ಟಿದವರು ಯಾರೂ ಕೂಡಲೇ ಸಾಯಲು ಇಚ್ಚಿಸುವುದಿಲ್ಲ. ತಮ್ಮ ಕುಲವನ್ನು ಬೆಳೆಸಲು ಇಚ್ಚಿಸುತ್ತಾರೆ. ನೋಡಲು ಒಣಗಿದಂತೆ ಇದ್ದರೂ ಮಳೆಯಾದಾಗ, ಹೇಗೆ, ಮತ್ತೆ ತನ್ನ ಒಡಲಿಂದ ಜೀವಂತವಾಗಿ ಚಿಗುರು ಹಸಿರೊಡೆದು ನಲಿಯುವ ಹಸಿರು ಹುಲ್ಲಂತೆ, ಮನುಷ್ಯರು ಸತ್ತರೂ ಅವರ ಸಂತಾನ ಈ ಭೂಮಿಯಲ್ಲಿ ನಿಂತಿಹುದು. ಆತ್ಮದ ಸತ್ವ ಈ ಜಗತ್ತಿನಲ್ಲಿ ಎಂದಿಗೂ ಕಡಿಮೆಯಾಗದು ಎಂದು ಮಾನ್ಯ ಗುಂಡಪ್ಪನವರು ಈ ಕಗ್ಗದಲ್ಲಿ ಪ್ರಸ್ತಾಪಮಾಡುತ್ತಾರೆ.
"What is born will go on procreating without giving much thought to the fact that death is imminent. A dry blade of grass also sprouts in time. People will perish, but mankind continues. The essence of life can not be subdued." - Mankutimma
Video Coming Soon
Detailed video explanations by scholars and experts will be available soon.