Mankutimmana Kagga by D.V. Gundappa
ಜ್ಞೇಯದ ದ್ವೀಪಕಜ್ಞೇಯಾಬ್ಧಿಯಾವರಣ । ಕಾಯಕದ ಗಿರಿಗೆ ಮಾನಸದಭ್ರಪಟಲ ॥ ಮೇಯವನು ಬಗೆದೇನ್ ಅಮೇಯ ಸುತ್ತಲುಮಿರಲು? । ಮಾಯೆಯೀ ಮಿಶ್ರಣವೊ - ಮಂಕುತಿಮ್ಮ ॥ ೧೦೩ ॥
jnEyada dvIpake ajneya abdhi AvaraNa । kAyakada girige mAnasada bhrapaTala ॥ mEyavanu bagedEn amEya suttalum iralu? । mAyeyI mishraNavo - Mankutimma ॥ 103 ॥
ಜ್ಞಾನಕ್ಕೆ ಅಜ್ಞಾನದ ಆವರಣ ಸುತ್ತಿಕೊಂಡಿದೆ. ಮಹತ್ತರ ಕಾರ್ಯಗಳನ್ನು ಸಾಧಿಸ ಹೊರಟಾಗ, ಅಜ್ಞಾನ ನಮ್ಮ ಮನಸ್ಸನ್ನು ಮೋಡದಂತೆ ಮುಸುಕಿಬಿಡುತ್ತದೆ. ಅಜ್ಞಾನ ನಮ್ಮನ್ನು ಸುತ್ತಿಕೊಂದಿರುವಾಗ, ಜ್ಞಾನವನ್ನು ಬೆದಕಿ, ಕೆದಕಿ ತೆಗೆಯುವುದು ಬಲು ಕಷ್ಟ. ಇಡೀ ಜಗತ್ತೇ ಜ್ಞಾನಾಜ್ಞಾನಗಳ ಮಿಶ್ರಣವೆಂಬುದೆ ಗುಂಡಪ್ಪನವರ ಈ ಕಗ್ಗದ ಹೂರಣ.
What can be known is just an island in the vast ocean of the unknown. Mind weaves a vail of illusion over the body - like a cloud over a mountain. What is the use of knowing, measuring all that can be measured while there is a vast scape of unmeasurable out there? The world is an interesting illusion created by this mixture of the measurable and the immesurable. - Mankutimma.
Video Coming Soon
Detailed video explanations by scholars and experts will be available soon.