ಪಟ್ಟಿಗೆ ಹಿಂತಿರುಗಿ

ಕಗ್ಗ 804 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಶುಭವಾವುದಶುಭವಾವುದು ಲೋಕದಲಿ ನೋಡೆ? । ವಿಭಜಿಸಲ್ಕಾಗದನ್ಯೋನ್ಯಸಂಬಂಧ ॥ ಉಭಯವನು ಮೀರ್ದ ಸಾಮ್ಯದ ನೀತಿಯೊಂದಿಹುದು । ಅಭಯಪಥವದು ನಿನಗೆ - ಮಂಕುತಿಮ್ಮ ॥ ೮೦೪ ॥

shubhavAvudu ashubhavAvudu lOkadali nODe? । vibhajisalke aagada anyOnya sambandha ॥ ubhayavanu mIrda sAmyada nItiyondihudu । abhaya pathavadu ninage - Mankutimma ॥ 804 ॥

ಕನ್ನಡದಲ್ಲಿ ಅರ್ಥ

ಹಾಗೆ ನೋಡಿದರೆ ಈ ಜಗತ್ತಿನಲ್ಲಿ ಶುಭ ಮತ್ತು ಅಶುಭ ಎನ್ನುವುದಾವುದು? ಇವೆರಡರನಡುವೆ ಒಂದು ಅನ್ಯೋನ್ಯ ಸಂಬಂಧವಿದೆ ಮತ್ತು ಶುಭಾಶುಭಗಳನ್ನು ಮೀರಿದಂತಹ ಮತ್ತು ಇವೆರಡನ್ನೂ ಸಮನ್ವಯಗೊಳಿಸುವ ಒಂದು ನೀತಿಯಿದೆ. ಆ ನೀತಿಯ ಪಥವನ್ನು ತುಳಿದರೆ ಅಲ್ಲಿ ನಮಗೆ ಅಭಯವೇ ಸಿಗುತ್ತದೆ ಎಂದು ಲೋಕದ ಮತ್ತು ಲೋಕಾತೀತವಾದ ವಿಚಾರವನ್ನು ನಮಗೆ ಅರುಹಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"Is there a way you can classify things in this world as auspicious or otherwise? No. It always depends on perspective, context and highly subjective. They are inseparable. But there is one truth that goes beyond both auspicious and inauspicious. If you follow that, there will be no fear." - Mankutimma

ವಿಷಯಗಳು

WisdomLifeDeath

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.