ಪಟ್ಟಿಗೆ ಹಿಂತಿರುಗಿ

ಕಗ್ಗ 803 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ- । ಲೆಲ್ಲೆಲ್ಲಿಯುಂ ನೋಡಿ ನಡೆದು ನಗುತಳುತ ॥ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗಿ । ಬಲ್ಲವನೆ ಮುಕ್ತನಲ - ಮಂಕುತಿಮ್ಮ ॥ ೮೦೩ ॥

ellaroLu tAnu tannoLage ellaru iruvavolu । ellelliyum nODi naDedu naguta aLuta ॥ bella lOkakkAgi tanage tAm kallAgi । ballavane muktanala - Mankutimma ॥ 803 ॥

ಕನ್ನಡದಲ್ಲಿ ಅರ್ಥ

ಎಲ್ಲರಲ್ಲಿ ತಾನು ಮತ್ತು ತನ್ನೊಳಗೆ ಎಲ್ಲರಿದ್ದಾರೆ ಎನ್ನುವಂತೆ ನಡೆದುಕೊಂಡು ಬದುಕಿನಲ್ಲಿ ನಗುತ, ಅಳುತ, ಲೋಕಕ್ಕೆ ಬೆಲ್ಲದಂತೆ ಇದ್ದರೂ ಒಳಗೆ ಕಲ್ಲಂತೆ ಇರಬಲ್ಲವನೇ ಮುಕ್ತ ಎಂದು ಉಲ್ಲೇಖಿಸಿದ್ದಾರೆ ಮಾನ್ಯ ಗುಂಡಪ್ಪನವರು ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

"I am one among everybody. Everybody is one with me. I look at everything. I walk alongside everything. I laugh, I cry. I will be sweet to the world. I shall be a rock to myself. Only a person who can do this is completely free." - Mankutimma

ವಿಷಯಗಳು

LifeSelf

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.