ಮಂಕುತಿಮ್ಮನ ಕಗ್ಗ by D.V. Gundappa
ಸಾರ್ವಭೌಮನು ಸೃಷ್ಟಿಯೊಳಗದೊರ್ವನೆ ಕಾಣೊ । ಸರ್ವವನು ತನ್ನಾತ್ಮವೆಂದು ಬದುಕುವನು ॥ ನಿರ್ವಿಕಾರಾಂತರಂಗದಿ ಜಗವ ಧರಿಸುವನು । ಸರ್ವಮಂಗಳನವನು - ಮಂಕುತಿಮ್ಮ ॥ ೮೦೫ ॥
sArvabhaumanu sRuShTiyoLage orvane kANo । sarvavanu tanna aatmavendu badukuvanu ॥ nirvikAra antarangadi jagava dharisuvanu । sarvamangaLanu avanu - Mankutimma ॥ 805 ॥
ಯಾವುದೇ ರೀತಿಯ ಮನೋವಿಕಾರಗಳಿಲ್ಲದೆ, ಜಗತ್ತಿನಲ್ಲಿ ಸಂಚರಿಸುವ ಚೇತನವೇ ತನ್ನ ಆತ್ಮವೆಂದು, ಜಗತ್ತನ್ನು ಧಾರಣೆಮಾಡಿದವನು, ಸಕಲ ರೀತಿಯಲ್ಲೂ ಮಂಗಳಮಯನಾಗಿರುತ್ತಾನೆ ಮತ್ತು ಅವನೇ ಸಾರ್ವಭೌಮನು ಎಂದು ಉಲ್ಲೇಖಮಾಡಿದ್ದಾರೆ, ಈ ಮುಕ್ತಕದಲ್ಲಿ.
"There is only one emperor in creation. It is he who can think that the whole universe is himself. He will embrace the world with a clear conscience without any distortion. He brings good to everyone." - Mankutimma
ವೀಡಿಯೊ ಶೀಘ್ರದಲ್ಲಿ ಬರುತ್ತಿದೆ
ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.