ಪಟ್ಟಿಗೆ ಹಿಂತಿರುಗಿ

ಕಗ್ಗ 786 - ಮಂಕುತಿಮ್ಮನ ಕಗ್ಗ

ಮಂಕುತಿಮ್ಮನ ಕಗ್ಗ by D.V. Gundappa

ಮೂಲ ಪಠ್ಯ (ಕನ್ನಡ)

ಅನ್ತವೆಲ್ಲಕುಮಿರುವುದಿರಲಿ; ವಿಷಯೇಂದ್ರಿಯದ । ಸಂತಾಪವುಂ ಮುಗಿವುದೆಂಬುದಲ ಪುಣ್ಯ? ॥ ಎಂತೊ, ನಿನ್ನಾಜ್ಞೆಯಿನೊ, ತಾಂ ಸೋತೋ, ಬೇಸತ್ತೊ । ಶಾಂತಿವಡೆಯಲಿ ಕರಣ - ಮಂಕುತಿಮ್ಮ ॥ ೭೮೬ ॥

antavu ellakum iruvudirali; viShayEndriyada । santApavum mugivudembudala puNya? ॥ ento, ninnAjneyino, tAm sOtO, besatto । shAntivadeyali karaNa - Mankutimma ॥ 786 ॥

ಕನ್ನಡದಲ್ಲಿ ಅರ್ಥ

ಎಲ್ಲಕ್ಕೂ ಒಂದು ಅಂತ್ಯವಿದೆ ಎನ್ನುವ ವಿಚಾರ ಒತ್ತಟ್ಟಿಗಿರಲಿ. ವಿಷಯಾಸಕ್ತಿಯಿಂದ ಇಂದ್ರಿಯಗಳು ಪಡುವ ದುಃಖಕ್ಕೆ ಒಂದು ಅಂತ್ಯವುಂಟು ಎನ್ನುವುದೇ ಪುಣ್ಯ. ಆ ಅಂತ್ಯ ಹೇಗಾದರೂ ಆಗಬಹುದು, ನೀನೇ ಇಂದ್ರಿಯ ನಿಗ್ರಹ ಮಾಡಬಹುದು ಅಥವಾ ಅವುಗಳೇ ಸೋತು ಹೋಗಬಹುದು ಅಥವಾ ಅನುಭವಿಸಿದ್ದು ಸಾಕಾಗಿ ಬೇಸತ್ತುಹೋಗಬಹುದು. ಹೇಗಾದರಾಗಲಿ ಇಂದ್ರಿಯಗಳ ಪ್ರಚೋದನೆಯಿಂದ ನಿರಂತರ ಕ್ರಿಯೆಯಲ್ಲಿ ಮಗ್ನರಾದ ಅಂಗಾಂಗಗಳು ಶಾಂತವಾದರೆ ಸಾಕು ಎಂದು ಬದುಕಿನಲ್ಲಿ ನಾವು ಪಡೆಯಬೇಕಾದ ನಿಜವಾದ ಶಾಂತಿಯ ಸ್ವರೂಪವನ್ನು ತೋರಿದ್ದಾರೆ ಮಾನ್ಯ ಗುಂಡಪ್ಪನವರು ನಮಗೆ ಈ ಮುಕ್ತಕದಲ್ಲಿ.

ಅರ್ಥ ಮತ್ತು ವ್ಯಾಖ್ಯಾನ

It is pleasant to know that everything has to end. Even the misery that is created by our senses (longing for pleasure). But it has an end - by your order, by its defeat or by sheer frustration. Let the senses attain peace. - Mankutimma

ವಿಷಯಗಳು

DeathPeace

ವೀಡಿಯೊ ವಿಭಾಗ

ವೀಡಿಯೊ ಶೀಘ್ರದಲ್ಲಿ ಬರುತ್ತಿದೆ

ಪಂಡಿತರು ಮತ್ತು ತಜ್ಞರಿಂದ ವಿವರವಾದ ವೀಡಿಯೊ ವಿವರಣೆಗಳು ಶೀಘ್ರದಲ್ಲಿ ಲಭ್ಯವಾಗುತ್ತದೆ.